
ಹೊಸನಗರ: ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಳ್ಳೆಕ್ಯಾತರ ಕಾಲೋನಿ ವಾಸಿ ಮಂಜುನಾಥ ಎಂಬಾತ ಬೈಕ್ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದು ಪತ್ನಿ ಅಮೃತ (21) ನೇಣೆಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಕಾರ್ಯನಿಮಿತ್ತ ಡಿಸೆಂಬರ್ 31ರ ಸಂಜೆ ತನ್ನ ಬೈಕಿನಲ್ಲಿ ಶಿಕಾರಿಪುರಕ್ಕೆ ಪತಿ ಮಂಜುನಾಥ (25) ತೆರಳಿದ್ದ ವೇಳೆ ಅಪಘಾತ ಸಂಭವಿಸಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿ ಆಗದೆ, ಹೊಸ ವರ್ಷದ ದಿನದ ಬೆಳಗ್ಗೆ 9ಗಂಟೆ ಅಸು ನೀಗಿದ ವಿಷಯ ತಿಳಿದ ಪತ್ನಿ, ತನ್ನ ಮನೆಯ ಹಿಂದಿನ ತೊಲೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಮೈಸೂರು ಮೂಲದ ಅಮೃತಳನ್ನು ಪ್ರೀತಿಸಿ ಕೊಲ್ಲೂರಿನಲ್ಲಿ ಮದುವೆ ಆಗಿದ್ದ ಎಂಬುದಾಗಿ ಕುಟುಂಬದ ಆಪ್ತ ಮೂಲಗಳು ತಿಳಿಸಿದ್ದು ಸ್ಥಳಕ್ಕೆ ಹೊಸನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ACCIDENT:SUICIDE
Discover more from Prasarana news
Subscribe to get the latest posts sent to your email.
