MARUTHIPURA:ಹಿಂದು ರುಧ್ರಭೂಮಿ ನಿರ್ಮಾಣ ಕಾಮಗಾರಿ ಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ…. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ…

ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸಬಾ ಹೋಬಳಿಯ ಅರಗೋಡಿ ಗ್ರಾಮದ ಸರ್ವೆ ನಂಬರ್ 8ರಲ್ಲಿ ನಿರ್ಮಾಣವಾಗಬೇಕಿದ್ದ ಹಿಂದೂ ರುದ್ರಭೂಮಿ ಕಾಮಗಾರಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ 1980 ನಿಯಮ 2(1)(19) ಉಲ್ಲಂಘನೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜನ ಸಂಗ್ರಾಮ ಪರಿಷತ್ನ ಸದಸ್ಯ ಹರೀಶ್ ಸಿ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೊಸನಗರ ಇವರಿಗೆ ಮನವಿಯನ್ನ ಸಲ್ಲಿಸಿದ್ದಾರೆ.ಅರಗೋಡಿ ಗ್ರಾಮದ ಸರ್ವೇ ನಂಬರ್ 8 ರಲ್ಲಿ ಸ್ಮಶಾನವನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶವನ್ನು ಮಾಡಿದ್ದು ಆದರೆ ಮಾರುತಿಪುರ ಗ್ರಾಮಪಂಚಾಯತ್ ಪುಣಜೆ ಗ್ರಾಮದ ಸರ್ವೆ ನಂಬರ್ 56 ರಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ನಿಯಮದ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಅಕ್ರಮವಾಗಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನಾಮಫಲಕವನ್ನು ನಿರ್ಮಿಸಿ ಅದೇ ಸರ್ವೇ ನಂಬರ್ ನಲ್ಲಿ ಕಂದಕವನ್ನು ತೆಗೆಯಲಾಗಿದೆ.
ಸರ್ವೆ ನಂಬರ್ 56 ಮತ್ತು 8ರಲ್ಲಿ ಅರಣ್ಯ ಪ್ರದೇಶ ಹೇರಳವಾಗಿ ಬೆಳೆದಿರುವುದರಿಂದ ಬೆಲೆ ಬಾಳುವ ಗಿಡಮರಗಳಿದ್ದು ವನ್ಯಜೀವಿಗಳು ವಾಸಿಸುವ ಪ್ರದೇಶವಾಗಿದೆ ಸರ್ವೆ ನಂಬರ್ 8ರಲ್ಲಿ ಜಂಟಿ ಸರ್ವೆ ಮಾಡಿ ಮಂಜೂರಾತಿ ನೀಡಿರುವುದನ್ನು ರದ್ದುಪಡಿಸಿ ಪುನಃ ಅರಣ್ಯ ಇಲಾಖೆ ವಶಪಡಿಸಿಕೊಳ್ಳಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಅರಣ್ಯ ಮೋಕದ್ದಮೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಅರಣ್ಯ ಸಂಪತ್ತನ್ನು ರಕ್ಷಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

MARUTHIPURA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe