
ಹೊಸನಗರ: ಟೀಕೆಗಳಿಗೆ ನಿಮ್ಮ ಸಾಧನೆ ಉತ್ತರವಾಗಬೇಕು ಸಾಧನೆಗಳ ಮೂಲಕ ಪ್ರತಿ ಒಬ್ಬ ಮಹಿಳೆಯು ತನ್ನನ್ನು ಟೀಕಿಸುವವರಿಗೆ ಉತ್ತರವನ್ನು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಶಿವಮೊಗ್ಗ ತಾಲೂಕ ಪಂಚಾಯಿತಿ ಹೊಸನಗರ ಹಾಗೂ ಮಲೆನಾಡು ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದಿಂದ ಆಯೋಜಿಸಲಾಗಿದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಮಹಿಳೆಯರು ಕುಟುಂಬ ವ್ಯವಸ್ಥೆಯಲ್ಲಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಆಡಳಿತ, ಉದ್ಯಮ, ವಿಜ್ಞಾನ ಮತ್ತು ಸಾಮಾಜಿಕ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಹಾಗೆಯೇ ಒಕ್ಕೂಟ ವ್ಯವಸ್ಥೆಯ ಮೂಲಕ ನೀವೆಲ್ಲರೂ ಒಟ್ಟಾಗಿದ್ದು ಮಹಿಳೆಯರಿಗೆ ಒಕ್ಕೂಟ ವ್ಯವಸ್ಥೆ ಆರ್ಥಿಕ ಬಲವನ್ನು ತುಂಬುತ್ತಿದೆ ಎಂದರು
ಹಾಗೆಯೇ ಇಲಾಖೆಗಳು ಸಹ ಮಹಿಳೆಯರಿಗೆ ಸರ್ಕಾರದಿಂದ ಸಿಗುವಂತಹ ಆರ್ಥಿಕ ಬಲವನ್ನ ತುಂಬುವಂತಹ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು ಅಲ್ಲದೆ ಭ್ರೂಣ ಹತ್ಯೆ ಅತ್ಯಂತ ಅಕ್ಷಮ್ಯ ಅಪರಾಧ ಅಂತ ಕೃತ್ಯಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ನನಗೆ ತಿಳಿಸಿ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸು ಕೆಲಸವನ್ನು ಮಾಡಲಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಆರ್ ಎಮ್ ಮಂಜುನಾಥ್ ಗೌಡ ಕುಟುಂಬ ನಿರ್ವಹಣೆ ಜೊತೆಗೆ ಮಹಿಳೆಯರು ಆರ್ಥಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಲ್ಲೂ ಸಹ ಭಾಗಿಯಾಗುತ್ತಿದ್ದು ಮಹಿಳೆಯರ ವಿಶೇಷ ಗುಣವಾಗಿದೆ ಜೊತೆಗೆ ಯಾವುದೇ ಒಕ್ಕೂಟ ಸಂಘಗಳಿಗೆ ಆರ್ಥಿಕ ಬಲವನ್ನು ತುಂಬುವ ಕೆಲಸವನ್ನು ಡಿಸಿಸಿ ಬ್ಯಾಂಕ್ ಮಾಡಲಿದ್ದು ಸ್ವಯಂ ಉದ್ಯೋಗ ಮಾಡುವಂತ ಮಹಿಳೆಯರಿಗೆ ವಿಶೇಷವಾದ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್ ನೀಡಲಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅಭಿನವ ಚೆನ್ನಬಸವ ಮಹಾಸ್ವಾಮಿಗಳು ಮೂಲೆಗದ್ದೆ ಮಠ ದೇಶದ ಸ್ವತಂತ್ರ ವ್ಯವಸ್ಥೆ ಮಹಿಳೆಯರ ಪಾತ್ರ ಬಹಳಷ್ಟು ಇದೆ ಮಹಿಳೆಯರಲ್ಲಿ ಇರುವ ಭಾವನಾತ್ಮಕತೆ ಅತೀ ದೊಡ್ಡ ಶಕ್ತಿಯಾಗಿದೆ. ಒಬ್ಬ ಮಹಿಳೆ ಮನೆಯ ಜವಾಬ್ದಾರಿ ವಹಿಸಿಕೊಂಡಾಗ ಅದನ್ನು ಹೃದಯದಿಂದ ಮತ್ತು ಬುದ್ಧಿವಂತಿಕೆಯಿಂದ ನಿಭಾಯಿಸುವ ಗುಣವನ್ನು ಹೊಂದಿರುತ್ತಾರೆ. ಮಹಿಳೆಯರು ಆತ್ಮಗೌರವ ಹಾಗೂ ಸ್ವಾವಲಂಬಿ ಜೀವನಕ್ಕೆ ಮುಂದಾದಾಗ ಮಾತ್ರ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಸುಮಸುಬ್ರಮಣ್ಯ, ಉಪಾಧ್ಯಕ್ಷ ಗೀತಾ ನಾಗೇಶ್, ಸಿ ಡಿ ಪಿ ಓ ಗಾಯಿತ್ರಿ, ಶಿಮಲು ಅಧ್ಯಕ್ಷ ವಿದ್ಯಾಧರ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರ ಮೌಳಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಕಮ್ಮ. ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.
WOMEN'S DAY..
