
ಹೊಸನಗರ:ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ತಾನದ ದೇವಾಲಯದ ಶಾಸಕರ ನಿಧಿಯಿಂದ ದೇವಾಲಯದ ಆವರಣದಲ್ಲಿ ಶೀಟ್ನಲ್ಲಿ ನಿರ್ಮಾಣವಾದ ಮೇಲ್ಛಾವಣಿ ಯನ್ನ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು ದೇವಾಲಯದ ಆವರಣದಲ್ಲಿ ದೇವಾಲಯ ಸಮಿತಿಯಿಂದ ಏರ್ಪಡಿಸುವ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು ಬಳಿಕ ಮಾತನಾಡಿ ದೇವಸ್ತಾನ ಜೀರ್ಣೋದ್ದಾರ ಕಾಮಗಾರಿ ಬರದಿಂದ ಸಾಗುತ್ತಿದ್ದು ಸಮಿತಿಯ ಸದಸ್ಯರ ಬೇಡಿಕೆಯಂತೆ ದೇವಾಲಯದ ಅಭಿವೃದ್ಧಿಗೆ ಅನುದಾನವನ್ನು ನೀಡಿದ್ದೇನೆ
ಮುಂದೆಯೂ ಸಹ ದೇವಸ್ಥಾನ ಅಭಿವೃದ್ಧಿಯಾಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಬಳಿಕ ವಿವಿಧ ಮನರಂಜನಾ ಕಾರ್ಯಕ್ರಮವನ್ನ ಕಾರ್ಯಕರ್ತರು ಹಾಗೂ ಸಮಿತಿಯ ಸದಸ್ಯರೊಡನೆ ವೀಕ್ಷಿಸಿದರು ಜಾತ್ರ ಸಮಿತಿ ಅಧ್ಯಕ್ಷರಾದ ದತ್ತಾತ್ರೇಯ ಎಚ್ ಎಲ್, ಕಾರ್ಯದರ್ಶಿ, ಸುನಿಲ್ ಕುಮಾರ್, ಸಮಿತಿಯ ಸದಸ್ಯರಾದ ಮನೋಹರ್, ಗಿರೀಶ್ ರಾವ್, ನಿತ್ಯಾನಂದ, ಗ್ಯಾರಂಟೀ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನ ಕೋಣೆ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಮೌಳಿ ಬಿಜಿ ಮುಖಂಡರಾದ ಏರಾಗಿ ಉಮೇಶ್,ಸದಾಶಿವ ಶೆಟ್ಟಿ, ಎ ವಿ ಮಲ್ಲಿಕಾರ್ಜುನ್,ಮಹೇಂದ್ರ ಗೋಪಿನಾಥ್,ಶಾಸಕರ ಆಪ್ತ ಕಾರ್ಯದರ್ಶಿ ಮಂಜುಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು...
INAUGURATION..
