RIPPONPET NEWS: ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ಕಾವ್ಯ.ವಿ ಗೆ ತಾಲೂಕು ಆಡಳಿತದಿಂದ ಸನ್ಮಾನ..

ಹೊಸನಗರ:ಅಂಧರ ಅಂತರರಾಷ್ಟ್ರೀಯ ಟಿ–20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ತಂಡದ ಪರವಾಗಿ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದ ರಿಪ್ಪನ್‌ಪೇಟೆಯ ಪ್ರತಿಭಾನ್ವಿತ ಆಟಗಾರ್ತಿ  ಕಾವ್ಯಾ ವಿ. ಅವರಿಗೆ ಬುಧವಾರ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ತಹಸಿಲ್ದಾರ್ ಭರತ್ ರಾಜ್  ಅಂದರ ಅಂತರಾಷ್ಟ್ರೀಯ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡ ವಿಜೇತವಾಗುವಲ್ಲಿ ಪಾತ್ರವನ್ನು ವಹಿಸಿ ದೇಶಕ್ಕೆ ಹಾಗೂ ಹೊಸನಗರ ತಾಲೂಕಿನ ಕೀರ್ತಿಯನ್ನು ಇವರು ಹೆಚ್ಚಿಸಿದ್ದು ಇವರ ಈ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದರು ಅಲ್ಲದೆ ಈ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಇವರದಾಗಲಿ ಎಂದು ಶುಭವನ್ನು ಹಾರೈಸಿದರು ಈ ಸಂದರ್ಭದಲ್ಲಿ ತಾಲೂಕು ಶಿರಸ್ತೆದಾರ್ ಸುಧೀಂದ್ರ ಕುಮಾರ್, ಸತೀಶ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಮಂಜುನಾಥ್ ಅಪೇಕ್ಷ ಲೋಹಿತ್, ಗ್ರಾಮಸಹಾಯಕ ಪ್ರವೀಣ್, ಅಶೋಕ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

RIPPONPET NEWS.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe