FUNERAL:ಪಂಚಭೂತಗಳಲ್ಲಿ ಲೀನವಾದ ಹುತಾತ್ಮ ಯೋಧ ಮಂಜುನಾಥ್…..
ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಂತ್ಯಕ್ರಿಯೆ…

ಹೊಸನಗರ: ತರಬೇತಿ ವೇಳೆ ಪ್ಯಾರಾಚೂಟ್ ಅಪಘಾತದಿಂದ ಹುತಾತ್ಮರಾಗಿದ್ದ ವಾಯು ಸೇನೆಯ ವಾರೆಂಟ್ ಆಫೀಸರ್ ಮಂಜುನಾಥ್ ಜಿ ಎಸ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಮಧ್ಯಾನ 3 ಗಂಟೆಗೆ ಅವರ ಹುಟ್ಟೂರಾದಾ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೂರಿನಲ್ಲಿ ನೆರವೇರಿತು.ಇದಕ್ಕೂ ಮೊದಲು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಕೆಲಕಾಲ ಇಡಲಾಗಿತ್ತು ಬಳಿಕ ಶಾಸಕರಾದ ಗೋಪಾಲಕೃಷ್ಣ ಬೇಳೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ ಅನಿಲ್ ಕುಮಾರ್ ಭೂಮರೆಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಹೆಬ್ಬಾರ್ ಅಂತಿಮ ಗೌರವವನ್ನು ಸಲ್ಲಿಸಿದರು ಬಳಿಕ ರಾಜ್ಯ ಪೊಲೀಸ್  ತುಕಡಿ ಹಾಗೂ ವಾಯು ಸೇನೆ ಕುಶಲತೋಪು ಸಿಡಿಸಿ ಅಂತಿಮ ಗೌರವವನ್ನು ಸಲ್ಲಿಸಿತು.
ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಮಂಜುನಾಥ ಜಿ ಎಸ್ ಪತ್ನಿ  ಅವರಿಗೆ ಹಸ್ತಾಂತರಿಸಲಾಯಿತು. ಮೃತದೇಹದ ಅಗ್ನಿ ಸ್ಪರ್ಶದ ವೇಳೆ ಜಮಾಯಿಸಿದ್ದ ಜನರು ಅಂತಿಮ ದರ್ಶನ ಪಡೆದರು ಅಂತ್ಯಕ್ರಿಯೆ ಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ,ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹಾಲೇಶ್, ಕಲಗೋಡು ರತ್ನಾಕರ್,ಕೆ ಎಸ್ ಪ್ರಶಾಂತ ಪಾಲ್ಗೊಂಡಿದರು....

FUNERAL...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading