WORKSHOP-SARA:ಉಚಿತ ಕುಸುರಿ ಮತ್ತು ಕೌದಿ ಹೊಲಿಗೆ ಕಾರ್ಯಗಾರ..

ಹೊಸನಗರ: ಬಟ್ಟೆಮಲ್ಲಪ್ಪ. ಇಲ್ಲಿನ ದೊಂಬೇಕೊಪ್ಪ ಸಾರ ಮತ್ತು ಹೆಗ್ಗೋಡು ಚರಕ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕುಸುರಿ ಮತ್ತು ಕೌದಿ ಹೊಲಿಗೆ ಕಾರ್ಯಗಾರವನ್ನು ಡಿಸೆಂಬರ್ 10 ರಿಂದ ಡಿಸೆಂಬರ್  12ರ ತನಕ ಸಾರ ಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಚರಕ  ಹೆಗ್ಗೋಡು ಇವರಿಂದ
"ಕುಸುರಿ" ಕಸೂತಿ ಮತ್ತು ಕೌದಿ ಹೊಲಿಗೆ ಕಾರ್ಯಗಾರ ಇದಾಗಿದ್ದು, ಇದೊಂದು ಮಹಿಳೆಯರಿಗೆ ಸುವರ್ಣ ಅವಕಾಶ .  ಮುರೂ  ದಿನ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಬೇತಿ ಇರುತ್ತದೆ. ಹಾಗೆ  ಮುರೂ ದಿನ ತರಬೇತಿಗೆ ಬಂದ ಮಹಿಳೆಯರಿಗೆ ದಿನಕ್ಕೆ 150 ರೂಪಾಯಿ ಬತ್ಯೆ ಕೊಡಲಾಗುವುದು. ಕಡ್ಡಾಯವಾಗಿ ಮೂರು ದಿನ ಹಾಜರಾಗಿ ಹೊಲಿಗೆಯನ್ನು ಕಲಿತುಕೊಳ್ಳಬಹುದಾಗಿದೆ. ಕಾರ್ಯಾಗಾರದಲ್ಲಿ ಮೊದಲು ಬಂದ 25 ಜನ ಮಹಿಳೆಯರಿಗೆ ಮಾತ್ರ ಆದ್ಯತೆ. ಮೊದಲೇ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ
ಸಾರ ಸೆಂಟರ್,  ದೊಂಬೆಕೊಪ್ಪ  ಫೋನ್ ನಂಬರ್ :7996473910 , 8277493346 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

WORKSHOP-SARA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading