

ಹೊಸನಗರ: ರಾಜ್ಯದಲ್ಲಿ ಪದೇಪದೇ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಸದ್ದು ಮಾಡುತ್ತಿರುವ ಕಾಂಗ್ರೆಸ್ ಇದೀಗ ಪರೋಕ್ಷ ಬೆಂಬಲ ನೀಡಿ ವಕ್ಬ್ ಬೋರ್ಡ್ ಹೆಸರಿನಲ್ಲಿ ರೈತರ ದಲಿತರ, ಕಾರ್ಮಿಕರ, ಮಠ ದೇವಸ್ಥಾನಗಳ, ಭೂಮಿಯನ್ನ ಕಬಳಿಸಲು ಹೊರಟಿದೆ ಎಂದು ಮಾಜಿ MLC ರುದ್ರೇಗೌಡ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದೆ ಎಲ್ಲಿ ಎಲ್ಲಿ ಮುಸ್ಲಿಂ ಆಳ್ವಿಕೆಗಳಿತ್ತು ಅಲ್ಲಿ ಇರುವಂತಹ ಭೂಮಿಗಳೆಲ್ಲ ವಕ್ಬ್ ಬೋರ್ಡ್ ಆಸ್ತಿ ಎಂಬಂತೆ ಎಲ್ಲವನ್ನು ಕಬಳಿಸುವ ಕೆಲಸಕ್ಕೆ ಮುಂದಾಗಿದ್ದು ಹಾಗೆಯೇ ಅದನ್ನು ಎಲ್ಲಿಯೂ ಪ್ರಶ್ನಿಸು ವಂತಿಲ್ಲದಾಗಿದೆ ವಕ್ಬ್ ಬೋರ್ಡ್ ಎಂಬುದು ಲಂಗು ಲಗಾಮಿ ಇಲ್ಲದ ಒಂದು ವ್ಯವಸ್ಥೆಯಾಗಿದ್ದು.
ರೈತರು, ದೇವಸ್ಥಾನಗಳು, ಮಠಗಳು, ಈ ಭೂಮಿ ನಮ್ಮದೆನ್ನುವುದಕ್ಕೆ ದಾಖಲೆಗಳನ್ನು ನೀಡಬೇಕು ಆದರೆ ವಕ್ಬ್ ಬೋರ್ಡ್ ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ ಈ ಹಿಂದೆ ಕಾಂಗ್ರೆಸ್ ಸೃಷ್ಟಿಸಿದ ವಕ್ಬ್ ಬೋರ್ಡ್ ಕಾನೂನಿನಂತೆ ವಕ್ಬ್ ಬೋರ್ಡ್ ತೀರ್ಮಾನಿಸಿದ ಜಾಗ ಹಾಗೂ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಸಚಿವ ಜಮೀರ್ ಅಹ್ಮದ್ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ಜಾಗವನ್ನು ವಕ್ ಬೋರ್ಡ್ ಗೆ ನೊಂದಾಯಿಸುವಂತೆ ಒತ್ತಡವನ್ನು ಹೇರುತ್ತಿದ್ದಾರೆ.
ಪ್ರತಿಯೊಬ್ಬ ರೈತರು ತಮ್ಮ ಪಾಹ ಣಿಗಳನ್ನ ಪರಿಶೀಲಿಸಿಕೊಳ್ಳಿ ಅದರಲ್ಲಿ ಗೊಂದಲಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ ಇಲ್ಲವಾದಲ್ಲಿ ಬಿಜೆಪಿಯ ಮುಖಂಡರು ಅಥವಾ ಕಾರ್ಯಕರ್ತರ ಗಮನಕ್ಕೆ ತನ್ನಿ ಎಂದರು.
ರಾಜ್ಯದ್ಯಂತ ಪ್ರತಿಭಟನೆ.
ಜಂಟಿ ಸಮಿತಿ ನಿರ್ಧಾರ ಪ್ರಕಟಣೆ ಮಾಡುವವರೆಗೂ ವಕ್ಬ್ ಬೋರ್ಡ್ ತನ್ನ ಯಾವುದೇ ಆಸ್ತಿಯನ್ನು ಘೋಷಣೆ ಮಾಡುವಂತಿಲ್ಲ ಇದಕ್ಕೆ ಬಿಜೆಪಿಯ ಸಂಪೂರ್ಣ ವಿರೋಧವಿದ್ದು ಇದರ ಸಲುವಾಗಿ ನ4 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ರೈತರು ಹಾಗೂ ಪ್ರತಿಯೊಬ್ಬ ನಾಗರಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಮತ್ತಿ ಮನೆ ಸುಬ್ರಹ್ಮಣ್ಯ, ಉಮೇಶ್ ಕಂಚಿಗಾರ್, ದೇವಾನಂದ್, ಮಲ್ಲಿಕಾರ್ಜುನ್, ತೀರ್ಥೇಶ್, ಶಿವಾನಂದ್, ಹಲಗದ್ದೆ ಉಮೇಶ್, ವೀರೇಶ್ ಅಲವಳ್ಳಿ, ಯುವರಾಜ್, ಮೋಹನ್ ಮಂಡನಿ ಉಪಸ್ಥಿತರಿದ್ದರು.
Discover more from Prasarana news
Subscribe to get the latest posts sent to your email.