PRESIDENT:ಕೋಡೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ “ಜಯಪ್ರಕಾಶ್ ಶೆಟ್ಟಿ” ಅವಿರೋಧ ಆಯ್ಕೆ..

ಹೊಸನಗರ; ತಾಲೂಕಿನ ಕೋಡೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪ್ರಭಾವಿ ಬಿಜೆಪಿ ಮುಖಂಡ ಜಯಪ್ರಕಾಶ್ ಶೆಟ್ಟಿ ಅವಿರೋಧ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ಉಮೇಶ್ ಅವರು ಪೂರ್ವ ಒಪ್ಪಂದದAತೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಾಗಿತ್ತು. ಒಟ್ಟು ೧೩ ಸದಸ್ಯ ಬಲದ ಈ ಗ್ರಾಮಾಡಳಿತದಲ್ಲಿ ೯ ಬಿಜೆಪಿ ಹಾಗು ೪ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು.
ಕೆ.ಎಸ್. ಉಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ (ಬಿಸಿಎಂ-ಎ) ಶುಕ್ರವಾರ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಬೆಂಬಲಿತ ಸದಸ್ಯ ಜಯಪ್ರಕಾಶ್ ಶೆಟ್ಟಿ ಹಾಗು ಶೇಖರಪ್ಪ ನಾಮಪತ್ರ ಸಲ್ಲಿಸಿದ್ದರು. ಕಡೆಗಳಿಗೆಯಲ್ಲಿ ಶೇಖರಪ್ಪ ನಮ್ಮ ಉಮೇದುವಾರಿಕೆ ಹಿಂಪಡೆದ ಕಾರಣ ಚುನಾವಣಾಧಿಕಾರಿ, ಪಶುವೈದ್ಯ ಡಾ. ನಟರಾಜ್ ಅವರು ಅಭ್ಯರ್ಥಿ ಜಯಪ್ರಕಾಶ್ ಶೆಟ್ಟಿ ಅವರ ಅವಿರೋಧ ಆಯ್ಕೆ ಘೋಷಿಸಿದರು. ಈ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಯೋಗೇಂದ್ರಪ್ಪ, ಅನ್ನಪೂರ್ಣ, ಶೇಖರಪ್ಪ, ಉಮೇಶ್, ಮಂಜಪ್ಪ, ರೇಖಾ, ಪ್ರೀತಿ, ಶ್ಯಾಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತಾಲೂಕು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಗಣಪತಿ ಬೆಳಗೋಡು, ಮನೋದರ್, ಹಿರಿಯ ಮುಖಂಡ ಉಮೇಶ್ ಕಂಚುಗಾರ್ ಸೇರಿದಂತೆ ಹಲವರು ನೂತನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅವರನ್ನು ಆತ್ಮೀಯವಾಗಿ ಅಭಿಂದಿಸಿದರು..

PRESIDENT..


Discover more from Prasarana news

Subscribe to get the latest posts sent to your email.

  • Related Posts

    RESIGNATION:ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಜಿ ಎನ್…

    ಹೊಸನಗರ:ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಬೂತ್ ಸಮಿತಿಗೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಜಿಎನ್ ರಾಜೀನಾಮೆ ನೀಡಿದ್ದಾರೆ.ತಮ್ಮ ರಾಜೀನಾಮೆ ಪತ್ರವನ್ನು ಹೊಸನಗರ ತಾಲ್ಲೂಕು ಬಿಜೆಪಿ ಕಛೇರಿಗೆ ತಲುಪಿಸಿದ್ದು ಅದರಲ್ಲಿ, 10 ವರ್ಷಗಳಿಂದ ಎಂ ಗುಡ್ಡೆಕೊಪ್ಪ ಗ್ರಾಮದ ಬೂತ್…

    Read more

    PRESIDENT:ಮೇಲಿನ ಬೆಸಿಗೆ ಗ್ರಾಮ ಪಂಚಾಯತ್ ಅವಿಶ್ವಾಸ ನಿರ್ಣಯಕ್ಕೆ ಸೋಲು..
    ಅಧ್ಯಕ್ಷರಾಗಿ ಶ್ರೀನಿವಾಸ್ ಮುಂದುವರಿಕೆ…

    ಹೊಸನಗರ:ತಾಲ್ಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.ಗ್ರಾಮ ಪಂಚಾಯಿತಿಯಲ್ಲಿ ಏಕ ಪಕ್ಷಿಯ ನಿರ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅಧ್ಯಕ್ಷ ಶ್ರೀನಿವಾಸ್ ಅವರಲ್ಲಿ ವಿಶ್ವಾಸವಿಲ್ಲ ಎಂದು 7 ಮಂದಿ ಸದಸ್ಯರು ಸಾಗರ ಉಪ ವಿಭಾಗಾಧಿಕಾರಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading