
ಹೊಸನಗರ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿ- ದ್ಯಾಲಯದಿ೦ದ ಈಚೆಗೆ ನಡೆದ 2023-24 ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ರಮ್ಯಾ ಚಂದ್ರು ಶೇ 95ರಷ್ಟು ಅಂಕಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರಮ್ಯಾ ಅವರು ಮಾಧುರಿ ದೇವಾನಂದ್ ನೇತೃತ್ವದ ಶ್ರೀ ಶಾರದ ಸಂಗೀತ ಶಾಲೆಯ ವಿದ್ಯಾರ್ಥಿನಿ. ಶಾಲೆಯ ಶಾರ್ವರಿ ಎ. ಉಡುಪ (ಶೇ 86.5), ನಿಶ್ಮಿತಾ ಎಸ್. ಪೂಜಾರಿ (ಶೇ 86) ಹಾಗೂ ಡಿ. ಧನಶ್ರೀ (ಶೇ 82) ಅಂಕ ಪಡೆದಿದ್ದು ಸಂಗೀತ ಶಾಲೆಗೆ ಕೀರ್ತಿಯನ್ನು ತಂದಂತಹ ಈ ನಾಲ್ವರು ವಿದ್ಯಾರ್ಥಿಗಳನ್ನು ಮಾಧುರಿ ದೇವಾನಂದ್ ಅಭಿನಂದಿಸಿದ್ದಾರೆ..
CLASSICAL MUSIC..
Discover more from Prasarana news
Subscribe to get the latest posts sent to your email.