
ಹೊಸನಗರ: ತಾಲೂಕಿನ ಮರುತಿಪುರ ಗ್ರಾಮಪಂಚಾಯತ್ ನಲ್ಲಿ ನಿರ್ಮಿಸಿರುವ ನೂತನ ಗ್ರಂಥಾಲಯ ಕಟ್ಟದ (ಅರಿವು ಕೇಂದ್ರವನ್ನು) ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.
ಬಳಿಕ ಮಾತನಾಡಿ ಅರಿವು ಕೇಂದ್ರಗಳು ಗ್ರಾಮೀಣ ಯುವಜನರ ಆಶಾಕಿರಣ ವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾಮಗಾರಿಗಳಿಗೆ ಉತ್ತೇಜಿನವನ್ನು ನೀಡುತ್ತಿದೆ ಜೊತೆಗೆ ಕ್ಷೇತ್ರದಲ್ಲಿ ರಸ್ತೆ, ಕಟ್ಟಡ ಕಾಮಗಾರಿ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಗ್ರಾಮೀಣ ರಸ್ತೆಗಳನ್ನು ಕೆಲವು ಅಭಿವೃದ್ಧಿಪಡಿಸಲಾಗಿದೆ. ಹಾಗೆಯೇ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಲ್ಲಿನ ಅಧ್ಯಕ್ಷರು ಹಾಗೂ ಸದಸ್ಯರುಗಳ ಬೇಡಿಕೆಗೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನವನ್ನು ನೀಡಲಾಗಿದೆ ಉಳಿದಂತೆ ಇಂದು ಸಹ ಹಲವು ಬೇಡಿಕೆಗಳನ್ನು ನನ್ನ ಮುಂದೆ ಇಟ್ಟಿದ್ದು ಅವುಗಳಿಗೂ ಸಹ ಶೀಘ್ರ ಅನುದಾನ ನೀಡಲಾಗುವುದು ಎಂದರು.

ಜೊತೆಗೆ ಸುಸಜ್ಜಿತವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಇದಕ್ಕೆ ಗ್ರಾಮ ಪಂಚಾಯಿತಿಯ ಅದ್ಯಕ್ಷರು ಹಾಗೂ ಸದಸ್ಯರು ತೆಗೆದುಕೊಂಡ ಕಾಳಜಿಯೇ ಕಾರಣ ಇದಕ್ಕೂ ಸಹ ಅನುದಾನ ಬೇಡಿಕೆ ಇಟ್ಟಿದು ಮುಂದಿನ ದಿನಗಳಲ್ಲಿ ಅದನ್ನ ನೀಡುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತನಾಡಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಂಬರ ಹೂವಿನ ಕೋಣೆ ಮಾರುತಿಪುರ ಗ್ರಾಮ ಪಂಚಾಯತ್ ನಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅದು ಅಲ್ಲದೆ ಸುಸಜ್ಜಿತ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಇದಕ್ಕೆ ನಮ್ಮ ಗ್ರಾಮಪಂಚಾಯತ್ ಅದ್ಯಕ್ಷರು ಮತ್ತು ಸದಸ್ಯರ ಸಹಕಾರ ಜೊತೆಗೆ ನಮ್ಮ ಶಾಸಕರ ಹೆಚ್ಚಿನ ಸಹಕಾರ ಕಾರಣವಾಗಿದೆ ಜೊತೆಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಪ್ರತಿ ಶಾಲೆಯಲ್ಲೂ ಸಹ ಶೌಚಾಲಯ ಗ್ರಂಥಾಲಯ ಹಾಗೂ ಸಭಾಭವನಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುತ್ತಿದ್ದು ಮಾರುತಿಪುರ ಪ್ರೌಢಶಾಲೆಗೂ ಸಹ ಹೈಟೆಕ್ ಶೌಚಾಲಯವನ್ನು ನೀಡಿದ್ದು ಜೊತೆಗೆ ಸಭಾಭವನ ನಿರ್ಮಾಣಕ್ಕೂ ಸಹ ಅನುದಾನವನ್ನ ನೀಡಿದ್ದಾರೆ ಎಂದರು ಅಲ್ಲದೆ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲ ರಸ್ತೆ ಹಾಳಾಗಿದ್ದು ಅವುಗಳನ್ನು ಸರಿಪಡಿಸಿ ಕೊಡುವಂತೆ ಶಾಸಕರ ಬಳಿ ಮನವಿಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಜಯಮ್ಮ ಉಪಾಧ್ಯಕ್ಷ ಇಂದ್ರೇಶ್ ಎನ್, ಸದಸ್ಯರಾದ ಕಲಾವತಿ ಎಚ್, ಪಿ ಸುಶೀಲ, ಶಂಕರ್ ಶೆಟ್ಟಿ, ಸುಮಾ ಹೆಚ್, ಅವಿನಾಶ್ ಎಸ್ ಜೆ , ನಾರಾಯಣಪ್ಪ, ಸುವರ್ಣ ಕೆ ಡಿ, ದೇವರಾಜ್, ಗಂಗಾ, ಭಾನುಮತಿ, ಚಂದ್ರಪ್ಪ ಉಪಸ್ಥಿತರಿದ್ದರು ಸದಸ್ಯ ದೀಪಿಕ ಆರ್ ಕೆ ಸ್ವಾಗತಿಸಿದರು..
LIBRARY OPENING.
Discover more from Prasarana news
Subscribe to get the latest posts sent to your email.
