
ಹೊಸನಗರ: ಸಾಗರ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕ ಎನ್ಎಸ್ಎಸ್ ವಿಶೇಷ ಶಿಬಿರವನ್ನು ತಾಲೂಕಿನ ಬಟ್ಟೆಮಲಪ್ಪದ ಸಾರ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಮಾರ್ಚ್ 1ರ ಶನಿವಾರ ಸಂಜೆ 4:00ಗೆ ಕಾರ್ಯಕ್ರಮ ನಡೆಯಲಿದ್ದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳುರೂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ರಾಜೇಶ್ವರಿ ಎಚ್ ವಹಿಸಲಿದ್ದಾರೆ ವಿಶೇಷ ಆಹ್ವಾನಿಕರಾಗಿ ಶಿಬಿರದಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾನಿಲಯದ ಡಾ. ಶುಭ ಮರವಂತೆ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಶಿಬಿರವು 01-03-2025 ರಿಂದ 07-03-2025 ರ ವರೆಗೆ ನಡೆಯಲಿದ್ದು ಪ್ರತಿದಿನ ವಿಶೇಷ ಉಪನ್ಯಾಸ, ಶಿಬಿರಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರಮಾಧಾನ, ಗ್ರಾಮ ಸ್ವಚ್ಛತಾ ಕಾರ್ಯ, ಪರಿಸರ ಜಾಗೃತಿ, ಬೆಂಕಿ ಅವಗಡ ನಿರ್ವಹಣೆ ತರಬೇತಿ ಸೇರಿ ಇತ್ಯಾದಿ ವಿಶೇಷ ಕಾರ್ಯಕ್ರಮಗಳು ಶಿಬಿರದಲ್ಲಿ ನೆರವೇರಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ರಾಜೇಶ್ವರಿ ತಿಳಿಸಿದ್ದಾರೆ.
NSS SPECIAL CAMP..
