

ಹೊಸನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಹೊಸನಗರ ತಾಲೂಕು ನಲ್ಲಿ 95 ತೀರಾ ನಿರ್ಗತಿಕರಿಗೆ ಹಾಗೂ ಅಶಕ್ತರಿಗೆ ಪ್ರತಿ ತಿಂಗಳು ರೂ 1,000/- ದಂತೆ ಮಾಶಾಸನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸದ್ರಿ ಫಲಾನುಭವಿಗಳಲ್ಲಿ ವಾಸ್ತವ್ಯಕ್ಕೆ ಕೂಡ ಸೂಕ್ತ ಮನೆಯಿಲ್ಲದ ಸದಸ್ಯರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಿಸಿಕೊಡಲಾಗಿದ್ದು, ಮಾಸ್ತಿಕಟ್ಟೆ ವಲಯದ ಖೈರಗುಂದ ಗ್ರಾಮದ ಮಾಸಾಶನ ಫಲಾನುಭವಿಗಳಾದ ಶ್ರೀ ವಾಸು ಪೂಜಾರಿರವರಿಗೆ ರೂ 1 ಲಕ್ಷ 15 ಸಾವಿರ ಮೊತ್ತದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದು, ಈ ದಿನ ತಾಲೂಕಿನ ತಹಶೀಲ್ದಾರರಾದ ಶ್ರೀಮತಿ ರಶ್ಮಿ ಹಾಲೇಶ್ ರವರು ಹಸ್ತಾಂತರಿಸಿದರು. ಈ ಸಂದರ್ಭ ಖೈರಗುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಬಿ ಕೃಷ್ಣಮೂರ್ತಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಂಜಿತ ಜಯರಾಮ್, ಖೈರಗುಂದ ಗ್ರಾಮ ಪಂಚಾಯತ್ PDO ಸಂತೋಷ್, ಜಿಲ್ಲಾ ಜನ ಜಾಗೃತಿ ಸದಸ್ಯರಾದ ಶ್ರೀ ದೇವಾನಂದ ಎನ್ ಆರ್, ನಾರಾಯಣ ಕಾಮತ್ ಹಾಗೂ ಶ್ರೀ ದೇವೇಂದ್ರ ಜಿ.ಹೆಚ್ ಖೈರಗುಂದ ಗ್ರಾಮ ಪಂಚಾಯತ್ ಸದಸ್ಯರು, ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಪ್ರದೀಪ್ ಆರ್, ಒಕ್ಕೂಟ ಅಧ್ಯಕ್ಷರಾದ ಸಂಜೀವ್ ಬಂಡಾರಿ, ಒಕ್ಕೂಟದ ಕಾರ್ಯದರ್ಶಿ ಅರುಣ್ ಭಟ್, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕಾರದ ಮಧುಕೇಶ್ವರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶಾಂತಕುಮಾರಿ, ಸೇವಾಪ್ರತಿನಿಧಿ, ಸಂಘದ ಸದಸ್ಯರು & ಗ್ರಾಮಸ್ಥರು ಉಪಸ್ಥಿತರಿದರು...
VATSALYA MANE...
Discover more from Prasarana news
Subscribe to get the latest posts sent to your email.