

ಸಾಗರ: ಹಣದ ಹಿಂದೆಯೇ ಹೋಗುತ್ತಿರುವ ನಾವು ಸಮಾಜದಲ್ಲಿ ನಮಗಿರುವ ಋಣವನ್ನು ಮರೆತು ಬಿಟ್ಟಿದ್ದೇವೆ ಎಂದು ಯಕ್ಷಗಾನ ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು.
ಬಟ್ಟೆಮಲ್ಲಪ್ಪ ದೊಂಬೆಕೊಪ್ಪದಲ್ಲಿ ಶ್ರೀರಾಮಕೃಷ್ಣ ವಿದ್ಯಾಲಯ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಕರ‍್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ನಂತರ ಅವರು ಉಪನ್ಯಾಸ ನೀಡಿದರು.
ತಂದೆ-ತಾಯಿ, ಗುರು ಹಿರಿಯರು ಮತ್ತು ಈ ಸಮಾಜದ ಋಣ ನಮ್ಮ ಮೇಲಿರುವಾಗ ಆ ಕುರಿತು ಯೋಚಿಸದೆ ಕೇವಲ ಹಣ ಗಳಿಸುವುದರಿಂದ ಮುಂದೊAದು ದಿನ ಪಶ್ಚಾತಾಪ ಪಡುವ ಸ್ಥಿತಿಗೆ ತಲುಪುತ್ತೇವೆ ಹಾಗಾಗಿ ಅವಕಾಶ ಸಿಕ್ಕಾಗೆಲ್ಲ ಸಮಾಜದ ಮೇಲಿನ ನಮ್ಮ ಋಣ ತೀರಿಸುವ ಪ್ರಯತ್ನ ಮಾಡಬೇಕು ಎಂದ ಅವರು ಅಂಕ ಮಾತ್ರದಿಂದ ಸಾಧನೆಯಲ್ಲ ಜೀವನದ ಅನುಭವವೇ ನಿಜವಾದ ಪಾಠ ಎಂದರು.
ಅಧ್ಯಕ್ಷತೆವಹಿಸಿದ್ದ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಡಿ. ದೇವರಾಜ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಾಧನೆ ಮಾಡುವ ಪ್ರತಿಭೆ ಮತ್ತು ಸಾಮರ್ಥ್ಯ ಇರಲಿದೆ ಆದರೆ ಸಾಧಿಸುವ ಮನಸ್ಸಿಟ್ಟು ಛಲದಿಂದ ಮುಂದೆ ಹೆಜ್ಜೆ ಇಟ್ಟವರು ಮಾತ್ರ ಸಾಧಕರಾಗುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸ್ಪರ್ಧೆ ಎನ್ನುವುದು ಅನಿವರ‍್ಯ ಹಾಗೂ ಸ್ಪರ್ಧಿಸುವ ಮನಸ್ಸಿನೊಂದಿಗೆ ಪರಿಶ್ರಮಪಟ್ಟವರಿಗೆ ಪದಕ ಪಡೆಯುವುದೂ ಕೂಡ ಕಷ್ಟವಲ್ಲ ಹಾಗಾಗಿ ಸ್ಪರ್ಧೆಯ ಜಗತ್ತಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಇಲ್ಲವಾದಲ್ಲಿ ಕಳೆದು ಹೋಗುವ ಭಯವಿದೆ ಎಂದ ಅವರು ಉತ್ತಮ ಚಾರಿತ್ರö್ಯ, ಉತ್ತಮ ಓದುಬರಹ ಸಮಾಜ ನಮ್ಮನ್ನು ಗುರುತಿಸುವಂತೆ ಮಾಡಲಿದೆ ಎಂದರು.
ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಸತ್ಯವತಿ ಚಂದ್ರಪ್ಪ, ಪೂಣ ðಮಾ, ಸಂಸ್ಥೆಯ ಸಂಚಾಲಕರಾದ ಗಣಪತಿ, ಬಸವರಾಜ್, ಮುಖ್ಯ ಶಿಕ್ಷಕ ಕರುಣಾಕರ್ ಮತ್ತಿತರರು ಇದ್ದರು.
SAGARA..
Discover more from Prasarana news
Subscribe to get the latest posts sent to your email.