

ಉಳ್ಳಾಲ: (ದ ಕ):ತಲಪಾಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರ ತಂಡ ಪಿಸ್ತೂಲು, ತಲವಾರು, ಚಾಕು ತೋರಿಸಿ 10 ರಿಂದ 12 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 11 ಲಕ್ಷ ರೂ.ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕೇರಳ ಕಡೆಗೆ ಕಾರಿನಲ್ಲಿ ಪರಾರಿಯಾಗಿದೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿ ಕೋಟೆಕಾರ್ ಬೀದಿಯಲ್ಲಿದ್ದು, ವಿವಿಧ ಕಡೆ ಶಾಖೆಗಳನ್ನು ಹೊಂದಿದೆ. ಆ ಪೈಕಿ ಕೆ.ಸಿ.ರೋಡ್ ಜಂಕ್ಷನ್ ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿರುವ ಶಾಖೆ ಸೇರಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಐವರು ಯುವಕರ ತಂಡ ಏಕಾಏಕಿ ಬ್ಯಾಂಕ್‌ಗೆ ನುಗ್ಗಿದೆ. ಬ್ಯಾಂಕ್ ನಲ್ಲಿ ಮೂವರು ಮಹಿಳೆಯರು, ಓರ್ವ ಪುರುಷ ಸಿಬ್ಬಂದಿ ಹಾಗೂ ಟೆಕ್ನಿಷಿಯನ್ ಇದ್ದರು. ಈ ಸಂದರ್ಭ ಸಿಬ್ಬಂದಿ ಬೊಬ್ಬೆ ಹಾಕಿದ್ದಾರೆ. ಬ್ಯಾಂಕ್‌ನ ಕೆಳ ಅಂತಸ್ತಿನ ಬೇಕರಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಿಬ್ಬಂದಿಯ ಬೊಬ್ಬೆ ಕೇಳಿ ಬ್ಯಾಂಕ್‌ಗೆ ಓಡಿ ಬಂದಿದ್ದಾರೆ. ಈ ಸಂದರ್ಭ ದರೋಡೆಕೋರರು ವಿದ್ಯಾರ್ಥಿಗಳಿಗೆ ಪಿಸ್ತೂಲ್ ಪ್ರದರ್ಶಿಸಿ ಬೆದರಿಸಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಒಂದು ಕಪಾಟು ತೆರೆಯದ ಕಾರಣ ಒಂದಷ್ಟು ನಗದು ಮತ್ತು ಚಿನ್ನಾಭರಣವನ್ನು ಬಿಟ್ಟು ಹೋಗಿದ್ದಾರೆ...
ROBBERY..
Discover more from Prasarana news
Subscribe to get the latest posts sent to your email.