RIPPONPET NEWS:ಪೌತಿ ಖಾತೆ ಆಂದೋಲನ..

ರಿಪ್ಪನ್ ಪೇಟೆ :ಕಂದಾಯ ಇಲಾಖೆಯ ಹೊಸನಗರ ತಾಲ್ಲೂಕು ಆಡಳಿತ ವತಿಯಿಂದ ಪೌತಿ ಖಾತೆ ಆಂದೋಲನವನ್ನು ಆಯೋಜಿಸ ಲಾಗಿದೆ.
ಕರ್ನಾಟಕ ಸರ್ಕಾರದ  ಮಹತ್ವಾಕಾಂಕ್ಷೆ ಯೋಜನೆಯಾದ ಪೌತಿ ಖಾತೆ ಆಂದೋಲನವನ್ನು ಕಂದಾಯ ಇಲಾಖಾ ವತಿಯಿಂದ ಹಮ್ಮಿಕೊಂಡು ತಾಲ್ಲೂಕು ಆಡಳಿತ ವತಿಯಿಂದ ಪ್ರಗತಿ ಕಾರ್ಯ ಕೈಗೊಳ್ಳಲಾಗುತ್ತಿದೆ‌‌‌ ಎಂದು ರಿಪ್ಪನ್ ಪೇಟೆ ನಾಡ ಕಚೇರಿಯ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಖಾತೆದಾರರ ಹೆಸರು ಪಹಣೆಯಲ್ಲಿ ಮುಂದುವರೆಯುತ್ತಿರುವುದರಿಂದ ಸರ್ಕಾರದ ವತಿಯಿಂದ ಯಾವುದೇ ಪರಿಹಾರ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಪಡೆಯಬಹುದಾದ ಸಬ್ಸಿಡಿ ಸೌಲಭ್ಯಗಳು, APMC ಮತದಾರರ ಪಟ್ಟಿಯಿಂದ ವಂಚಿತ ಹಾಗೂ PM ಕಿಸಾನ್ ಸಮ್ಮಾನ್ ಯೋಜನೆಯ ಆರ್ಥಿಕ ಸಹಾಯದಿಂದ ವಂಚಿತ.... ಹೀಗೆ ಹತ್ತು ಹಲವಾರು ಉಪಯೋಗಗಳನ್ನು ತಿಳುವಳಿಕೆ ಕೊರತೆ ಹಾಗೂ ಕುಟುಂಬ ಕಲಹ- ಮನಸ್ತಾಪದಿಂದ ಇಂದಿಗೂ ಮೃತ ರೈತರ ಹೆಸರಿಗೇ ಖಾತೆ ಮುಂದುವರೆಸಿ ಎಲ್ಲಾ ಸೌಲಭ್ಯ ಹಾಗೂ ಆರ್ಥಿಕ ಸಹಾಯದಿಂದ ವಂಚಿತರಾದಂತ ರವರಿಗೆ ಇದಕ್ಕೆಲ್ಲ  ಪರಿಹಾರವಾಗಿ

ಮೃತ ಕುಟುಂಬದ ಸದಸ್ಯರು ಮೃತರ ಹೆಸರಿಗೆ ಪಹಣೆ ದಾಖಲೆ ಹೊಂದಿದ್ದರೆ ತಮ್ಮ ಗ್ರಾಮ ಆಡಳಿತ ಅಧಿಕಾರಿಗಳನ್ನು ನಾಡಕಛೇರಿ ಅಥವಾ ತಾಲ್ಲೂಕು ಕಛೇರಿಗೆ ಭೇಟಿ ನೀಡಿ  ಮೃತ ಖಾತೆದಾರರ ವಾರಸುದಾರರ ಮಾಹಿತಿಗೆ ಸಂಬಂಧಿಸಿದಂತೆ ವಂಶವೃಕ್ಷ.... ಎಲ್ಲಾ ವಾರಸುದಾರರ ಆಧಾರ್ ಕಾರ್ಡ್ ಹಾಗೂ ಮೃತರ ಮರಣ ದಾಖಲಾತಿಗಳೊಂದಿಗೆ  ತಮ್ಮ ಹೆಸರಿಗೆ ಖಾತೆ ದಾಖಲಿಸಿಕೊಂಡು ಸಕಲ ಸೌಲಭ್ಯಗಳ‌ನ್ನು ಪಡೆದುಕೊಳ್ಳುವಂತೆ ರಿಪ್ಪನ್ ನಾಡ ಕಚೇರಿಯ ಅಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ...

RIPPONPET NEWS


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading