

ಹೊಸನಗರ: ಸತತ 3 ನೇ ಬಾರಿಗೆ ದೆಹಲಿಯ ಗಣರಾಜ್ಯೋತ್ಸವ ಪೆರೆಡ್ ಗೇ ಆಯ್ಕೆಯಾದ ಸಿ ಆರ್ ಪಿ ಎಫ್ ಯೋಧೆ ಚಾಂದಿನಿ ಅವರ ಪೋಷಕರನ್ನು ಅವರ ಸ್ವಗೃಹದಲ್ಲಿ ಇಂದು ಸ್ವಾಮಿ ವಿವೇಕಾನಂದ ಯುವ ವೇದಿಕೆ ವತಿಯಿಂದ ಸನ್ಮಾನಿಸಾಯಿತು.
ಸನ್ಮಾನಿಸಿ ಮಾತಾನಾಡಿದ ಸ್ವಾಮಿ ವಿವೇಕಾನಂದ ವೇದಿಕೆಯ ಸಂಚಾಲಕರಾದ ನಗರ ನಿತಿನ್ ತಾಲೂಕಿಗೆ ಹೆಮ್ಮೆ ತರುವಂತ ವಿಚಾರ ಇದಾಗಿದ್ದು ತಾಲೂಕಿನ ಪುಟ್ಟ ಗ್ರಾಮವಾದ ಕಚ್ಚಿಗೆ ಬೈಲಿನ ಕಾಡಳ್ಳಿ ಮನೆತನದ ಧರ್ಮಪ್ಪ ಮತ್ತು ವೇದಾವತಿಯವರ ಪುತ್ರಿ ಯಾದಂತ ಚಾಂದಿನಿ ಅವರ ಈ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂತಹ ಬಹುದೊಡ್ಡ ಸಾಧನೆಯಾಗಿದೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿಯ ತನಕ ಸರ್ಕಾರಿ ಶಾಲೆಯಲ್ಲಿ ಓದಿ ಸೇನೆಯನ್ನು ಸೇರಿ ಹುಟ್ಟೂರಿಗೆ ದೇಶಕ್ಕೆ ಕೀರ್ತಿಯನ್ನು ತಂದಂತಹ ಯೋಧಯ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವರ ಪೋಷಕರನ್ನ ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಮಂಡ್ರಿ ಪ್ರಮುಖರಾದ
ಗಣಪತಿ ಬೆಳಗೋಡು, ಶ್ರೀಧರ್ ಚಿಕ್ಕನಕೊಪ್ಪ, ಮಂಜುನಾಥ್, ರಾಘವೇಂದ್ರ , ವಿಕ್ರಂ ಭಟ್, ಸಚ್ಚಿನ್, ಗೋವರ್ಧನ್, ಪ್ರಮೋದ್, , ಸುಮುಖ್, ಬೋಜಪ್ಪ, ವಸಂತ್ ಹಾಗೂ ಸಂಘಟನೆಯ ಇತರರು ಇದ್ದರು....
REPUBLIC DAY...
Discover more from Prasarana news
Subscribe to get the latest posts sent to your email.