

ಹೊಸನಗರ : ಪರೀಕ್ಷೆಗೆ ನಾವು ಹೆದರಬಾರದು ಏಕೆಂದರೆ ಪರೀಕ್ಷೆ ಎನ್ನುವುದು ವಿದ್ಯಾರ್ಥಿಯೊಬ್ಬ ಉತ್ತೀರ್ಣಗೊಂಡು ಮುಂದಿನ ಮತ್ತು ಮೇಲಿನ ತರಗತಿಗಳಿಗೆ ಅರ್ಹತೆ ಪಡೆಯುವುದಕ್ಕೆ ಅತ್ಯಂತ ಅವಶ್ಯ ಅಂತಯೇ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮತ್ತು ಪ್ರತಿಯೊಂದು ಉತ್ತಮ ಕಾರ್ಯದಲ್ಲಿ ಪರೀಕ್ಷೆ ಎನ್ನುವ ಸವಾಲು ಎದುರಿಸಿದಾಗ ಮಾತ್ರವೇ ಸಾಧನೆ ಹಾಗೂ ಯಶಸ್ಸು ದೊರೆಯುವುದಕ್ಕೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಆಯೋಜನೆಗೊಂಡಿದ್ದ ವಿಶ್ವಾವಸು ಸಂವತ್ಸರದ ರಾಮೋತ್ಸವ ಸಮಾರೋಪ ಧರ್ಮ ಸಭೆಯ ದಿವ್ಯಸಾನ್ನಿಧ್ಯವಹಿಸಿದ್ದ ಅವರು ರಾಮೋತ್ಸವ, ರಥೋತ್ಸವದಂತಹ ಕಾರ್ಯಕ್ರಮಗಳ ಉದ್ದೇಶ ಮತ್ತು ಮಹತ್ವ ಹಾಗೂ ಒಂದು ಧಾರ್ಮಿಕ ಕರ‍್ಯಕ್ರಮವನ್ನು ಮಾಡುವಾಗ ಎದುರಿಸಬೇಕಾದ ಸವಾಲುಗಳ ಕುರಿತು ವಿವರಿಸಿ ಆಶೀರ್ವಚನ ನೀಡಿದರು.
ಹಿಂದೆ ರಕ್ಕಸರ ಸಂಹಾರಕ್ಕೆ ಪ್ರಪ್ರಥಮ ಬಾರಿಗೆ ವಿಶ್ವಾಮಿತ್ರ ಋಷಿಗಳು ಬಾಲಕನಾಗಿದ್ದ ರಾಮನನ್ನು ಕರೆದುಕೊಂಡು ಹೋಗುವುದಕ್ಕೆ ಅಯೋಧ್ಯೆಗೆ ಬಂದಾಗ ದಶರಥ ಮಹಾರಾಜ ರಾಮನನ್ನು ಕಳಿಸುವುದಕ್ಕೆ ಒಪ್ಪಿರಲಿಲ್ಲ ಆದರೆ ವಿಷಯ ತಿಳಿಸಿ ಸಮ್ಮತಿಸಿ ಕರೆದುಕೊಂಡು ಹೋಗ ಮೇಲೆ ಮುಂದೆ ಅದೇ ಪ್ರಕರಣ ರಾಮ ಎಂತಹ ಸಮಸ್ಯೆಗಳನ್ನು,ಪರೀಕ್ಷೆಗಳನ್ನು ಎದುರಿಸಬಲ್ಲ ಎನ್ನುವುದು ಜಗತ್ತಿಗೆ ತಿಳಿಯುವುದಕ್ಕೆ ಸಾಧ್ಯವಾಯಿತು ಎಂದ ಅವರು ನಮ್ಮ ಸೋಲು ಗೆಲುವುಗಳನ್ನು ನಿರ್ಧರಿಸುವ ಶಕ್ತಿ ಅದು ಮೇಲಿದೆ ಹಾಗಾಗಿ ಎದುರಿಸುವ ಮನಸ್ಥಿತಿ ಮಾತ್ರ ನಮ್ಮದಾಗಬೇಕು ಎಂದರು.
ರಾವಣನ ಕಾಲದಲ್ಲಿ ಪರಿಸ್ಥಿತಿ ಸರಿ ಇಲ್ಲದಿದ್ದರೂ ಜಗತ್ತಿನಲ್ಲಿರುವ ಜೀವಿಗಳ ಮನಸ್ಥಿತಿ ಚೆನ್ನಾಗಿತ್ತು ಆದರೆ ಇಂದು ವಿಷಮ ಕಾಲದಲ್ಲಿ ನಾವಿದ್ದೇವೆ, ಪರಿಸ್ಥಿತಿ ಮತ್ತು ಮನಸ್ಥಿತಿ ಎರಡೂ ಚೆನ್ನಾಗಿಲ್ಲ ಇಂತಹ ಕಾಲಘಟ್ಟಕ್ಕಂತೂ ರಾಮನಂತಹ ಮಹಾಪುರುಷನ ಆದರ್ಶಗಳು ಬೇಕು. ಅದು ಪ್ರೇರಣೆಯಾಗುವುದಕ್ಕಾಗಿಯೇ ಇಂತಹ ರಾಮೋತ್ಸವದಂತಹ ಕಾರ್ಯಕ್ರಮಗಳು ಮನಮುಟ್ಟುವ ರೀತಿಯಲ್ಲಿ ನಡೆಯಬೇಕು ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ನಡೆದ ವಿಶೇಷ ಪೂಜೆಯನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಕುಟುಂಬ ನೆರವೇರಿಸಿತು. ಹಾಗೂ ೧೦೮ ಬಗೆಯ ಸುವಸ್ತುಗಳನ್ನು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಕ್ಕೆ ಸಮರ್ಪಿಸಿ, ಶ್ರೀಗಳವರಿಂದ ಅನುಗ್ರಹ ಪಡೆದುಕೊಂಡರು. ಶ್ರೀರಾಮಪಟ್ಟಾಭಿಷೇಕ ಮತ್ತಿತರ ಧಾರ್ಮಿಕ ಕರ‍್ಯಕ್ರಮ ಜರುಗಿತು.
ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಶಿಕಾರಿಪುರ, ಉದ್ಯಮಿ ಪ್ರಕಾಶ್ ಕೋಣಂದೂರು, ರಾಮೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಜಟ್ಟಿಮನೆ, ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಗಣಪತಿ ಭಟ್ ಗುಂಜಗೋಡು, ರಾಮೋತ್ಸವ ಸಮಿತಿ ಮತ್ತು ಮಹಾಮಂಡಲದ ಪದಾಧಿಕಾರಿಗಳು ಇದ್ದರು.
RAMOTSAVA...
Discover more from Prasarana news
Subscribe to get the latest posts sent to your email.