NA D’SOUZA: ‘ನಾಡಿ’ ಬದುಕು- ಬರಹ ಸಾಕ್ಷ್ಯ ಚಿತ್ರ ಬಿಡುಗಡೆ..

ಸಾಗರ: ನಾ. ಡಿಸೋಜರವರು ರಾಜ್ಯದ ಪ್ರಮುಖ ಸಾಹಿತಿಯಾಗಿ, ಹೋರಾಟಗಾರರಾಗಿ, ಪರಿಸರ ಪ್ರೇಮಿಯಾಗಿ, ನಾಡು ಕಂಡ ಅಪರೂಪದ ಸರಳ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಿದವರು. ಇವರನ್ನು ಮುಳುಗಡೆಯ ಕವಿ ಎಂದು ಸಮಾಜ ಗುರುತಿಸಿದ್ದರೂ ಸಹ, ಅವರು ಸಾಗರ ಸುತ್ತಮುತ್ತಲಿನ ಜನರ ಬದುಕನ್ನು ಬಹಳ ಹತ್ತಿರದಿಂದ ಗಮನಿಸಿ ಅವುಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ. ನಾಡಿಯವರು ಸಾಹಿತ್ಯದಲ್ಲಿ ಅನೇಕ ಪ್ರಯೋಗಗಳನ್ನು ರೂಢಿಸಿಕೊಂಡು ಯಶಸ್ಸನ್ನು ಕಂಡಿದ್ದಾರೆ. ಸ್ಥಳೀಯ ಇತಿಹಾಸ, ಮನೋವಿಜ್ಞಾನ, ಹಸೆ-ಚಿತ್ತಾರ, ಬುಡಕಟ್ಟು ಸಮುದಾಯದ ಬದುಕು ಬವಣೆ, ಪರಿಸರದ ಬದಲಾವಣೆ, ಕೃಷಿ ಬದುಕಿನ ಏರಿಳಿತ, ಶರಾವತಿ ಮುಳುಗಡೆ ಸಂಕಟಗಳು ಇವರ ಸಾಹಿತ್ಯದ ಪ್ರಮುಖ ವಿಷಯಗಳಾಗಿವೆ. ಜೊತೆಯಲ್ಲಿ ಮಕ್ಕಳಿಗಾಗಿ ಸಣ್ಣ ಕಥೆ, ಕಾದಂಬರಿ, ನಾಟಕಗಳು ಹೀಗೆ ಅನೇಕ ಯಶಸ್ವಿ ಪ್ರಯೋಗಗಳು ಇವರಿಂದ ಮೂಡಿವೆ.


ಇದೆ ಭಾಗದವರಾದ ನಮಗೆ ನಮ್ಮ ನಡುವೆ ಇರುವ ಹಿರಿಯ ಚೇತನ ನಾ.ಡಿ. ಕುರಿತಾದ, ಅವರ ಬದುಕನ್ನು ಪರಿಚಯಿಸುವ ನಿಟ್ಟಿನಲ್ಲಿ, ಏಸು ಪ್ರಕಾಶರವರ ಆಲೋಚನೆಗಳ ಮೂಲಕ ಈ ಪ್ರಯತ್ನಕ್ಕೆ ಅಡಿಯಿಟ್ಟು, ಅನಿಮಿಷ ಚಿತ್ರಶಾಲೆಯ ಮೂಲಕ ಗಾರ್ಗಿ ಕಾರೇಹಕ್ಲುರವರ ನಿರ್ದೇಶನದಲ್ಲಿ, ದಿವಂಗತ ಏಸುಪ್ರಕಾಶ್, ಎಂ.ಕೆ. ವೆಂಕಟೇಶ ಮೂರ್ತಿ, ಧನುಷ್ ಕುಮಾರ್‌ರವರ ಸಹಯೋಗದಲ್ಲಿ `ನಾಡಿ' ಬದುಕು-ಬರಹ ಕುರಿತಾದ ಸಾಕ್ಷ್ಯ ಚಿತ್ರವನ್ನು ನಿರ್ಮಿಸಲಾಗಿದೆ. ಈ ಸಾಕ್ಷ್ಯ ಚಿತ್ರದ ಮೊದಲ ಪ್ರದರ್ಶನ ನಾ.ಡಿ. ಅಭಿಮಾನಿಗಳ ಸಮ್ಮುಖದಲ್ಲಿ ಸಾಗರದ ಕಾಗೋಡು ತಿಮ್ಮಪ್ಪ ರಂಗ ಮಂದಿರದಲ್ಲಿ 2024 ನವೆಂಬರ್ 30ರಂದು ಸಂಜೆ 4:00ಕ್ಕೆ ಪ್ರದರ್ಶನಗೊಳ್ಳಲಿದೆ.
ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ನಾಡಿಯವರ ಎಲ್ಲ ಒಡನಾಡಿಗಳು, ಮಾಧ್ಯಮ ಮಿತ್ರರು, ಸಾರ್ವಜನಿಕರು ನಮ್ಮ ನಡುವಿನ ಹೆಮ್ಮೆಯ ಸಾಹಿತಿಗಳನ್ನು ನಾಡಿಗೆ ಪರಿಚಯಿಸುವ ಕಾಯಕದಲ್ಲಿ ಸೇರಿಕೊಳ್ಳೋಣ ಪಾಲ್ಗೊಳ್ಳುವಂತೆ ಅನಿಮಿಷ ಚಿತ್ರತಂಡ  ಆಹ್ವಾನಿಸಿದೆ.

NA D'SOUZA


Discover more from Prasarana news

Subscribe to get the latest posts sent to your email.

  • Related Posts

    SUMMER CAMP:ಶ್ರೀಧ‌ರ್ ರಂಗಾಯಣ ನೇತೃತ್ವದಲ್ಲಿ
    ಚಿಣ್ಣರಿಗಾಗಿ ಬೇಸಿಗೆ ಶಿಬಿರ…

    ಹೊಸನಗರ: ಮಕ್ಕಳ ಸೃಜನಶೀಲತೆ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಶ್ರೀಧರ್ ಗಂಗಾಯಣ ಹಾಗೂ ನೀನಾಸ ಂ ಮತ್ತು ರಂಗಾಯಣದಲ್ಲಿ ಪದವಿಯನ್ನು ಪಡೆದಿರುವ ಕಲಾವಿದರಿಂದ ಮಕ್ಕಳಿಗೆ ದಿನಾಂಕ 11-4-2025 ರಿಂದ 26-4-2026 ವರೆಗೆ ವಿಶೇಷ ಮೂರನೇ ವರ್ಷದ ಬೇಸಿಗೆ ಶಿಬಿರವನ್ನು ಶಾಸಕರ ಸರ್ಕಾರಿ ಹಿರಿಯ…

    Read more

    SELEBRATION:SARA ಸಾರ ಸಂಸ್ಥೆಗೆ 10 ರ ಸಂಭ್ರಮ…
    ಏ.5 ರಿಂದ 7 ರ ವರೆಗೆ ಚಲನಚಿತ್ರ ಪ್ರದರ್ಶನ ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಣೆ….

    ಹೊಸನಗರ: ಜಿಲ್ಲೆಯಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಪ್ರತಿಷ್ಠಿತ ಸಂಸ್ಥೆ ಎಂದೆನಿಸಿಕೊಂಡಿರುವ ಸಾರ ಸಂಸ್ಥೆ ದಂಬೆಕೊಪ್ಪ ತನ್ನ 10 ವರ್ಷ ಗಳನ್ನು ಪೂರೈಸಿದ್ದು ಈ ನಿಟ್ಟಿನಲ್ಲಿ ಸಂಸ್ಥೆ ಏಪ್ರಿಲ್ 5,6,7 ರಂದು ವಿಶೇಷ ವಿವಿಧ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಸಾರ ಸಂಸ್ಥೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading