HUNTING:ಕಾಡುಕೋಣ ಬೇಟೆ: ಮೂವರ ಬಂಧನ: ಇಬ್ಬರೂ ನಾಪತ್ತೆ….

ಹೊಸನಗರ: ಸಾಗರ ವಿಭಾಗದ ತಾಲೂಕಿನ ನಗರ  ವಲಯ ಅರಣ್ಯದಲ್ಲಿ ಇದೇ ಜನವರಿ 8ರ ಬೆಳಗಿನ  3 ಗಂಟೆಯ ಸುಮಾರಿಗೆ ಸಂಪೆಕಟ್ಟೆ ಶಾಖೆ ಹೊಸೂರು ಗ್ರಾಮದ ಸರ್ವೆ ನಂಬರ್ 4 ಮತ್ತಿಕೈ ಮೀಸಲು ಅರಣ್ಯ ಪ್ರದೇಶದಲ್ಲಿ  ಸುಮಾರು 4 ಅಥವಾ 5 ವರ್ಷದ ಒಂದು ಹೆಣ್ಣು ಕಾಡುಕೋಣವನ್ನು ಅಕ್ರಮ ಬೇಟೆಯಾಡಿ ಕಾಲು ಹಾಗು ತಲೆಯನ್ನು ಸ್ಥಳದಲ್ಲೆ  ಬಿಟ್ಟು,  ಮಾಂಸವನ್ನು ಸಾಗಾಣಿಕೆ ಮಾಡಿರುವ ಸಂಬಂಧ ಖಚಿತ ಮಾಹಿತಿ ದೊರೆತು ವನ್ಯಜೀವಿ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಆರೋಪಿಗಳು ನಾಪತ್ತೆ ಆಗಿದ್ದರು. ಸಾಗರ ಡಿಎಫ್ ಓ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಹೊಸನಗರ ಎಸಿಎಫ್ ಕೆ.ಬಿ. ಮೋಹನ್  ಕುಮಾರ್, ನಗರ ಆರ್ ಎಫ್ ಒ ಸಂತೋಷ್ ಮಲ್ಲನಗೌಡ್ರು, ಹೊಸನಗರ ‌ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಹಾಗು ಸಿಬ್ಬಂದಿಗಳು ಸೂಕ್ತ ಕಾರ್ಯಚರಣೆ ನಡೆಸಿ ಆರೋಪಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಆರೋಪಿಗಳಾದ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ವಾಸಿ ಮಹಮ್ಮದ್ ಅಶ್ರಫ್, ಬೈಂದೂರು ತಾಲೂಕಿನ ಶಿರೂರು ಗ್ರಾಮದ ಹಣಬರಕೇರಿ ವಾಸಿ ಆಲಿಬಾಪು ಯಾಸೀನ್ ಹಾಗೂ ಬೈಂದೂರು ತಾಲೂಕು ಶಿರೂರು ಗ್ರಾಮದ ಮದ್ದೋಡಿ ರೋಡ್ ಜೋಗೂರ್ ಕ್ರಾಸ್ ವಾಸಿ ವಾಸಿಂ ಅಕ್ರಂ ನನ್ನು ಬಂದಿಸಿದ್ದು, ಇನ್ನುಳಿದ ಇಬ್ಬರೂ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.
ಕಾರ್ಯಚರಣೆಯಲ್ಲಿ ನಗರ ವಲಯ ಉಪ ಅರಣ್ಯಾಧಿಕಾರಿ ಸತೀಶ್ , ಟಿ.ಪಿ.ನರೇಂದ್ರ ಕುಮಾರ್,  ಅಮೃತ್ ಸುಂಕದ್, ರಾಘವೇಂದ್ರ ತೆಗ್ಗಿದ್, ರಾಜೇಂದ್ರ ಜಿ.ಡಿ, ಹಾಗು ಗಸ್ತು ಅರಣ್ಯ ಪಾಲಕರಾದ ಮನೋಜ್ ಕುಮಾರ್‌ ಕನೇರಿ, ಯೋಗರಾಜ್,ಎ.ವಿ.ಮನೋಜ್,ಸುಬ್ಬಣ್ಣ ಸತೀಶ್, ದಿವಾಕರ್, ಚಾಲಕ ರಾಮುಗಾಣಿಗ ಸಿಬ್ಬಂದಿಗಳು ಹಾಜರಿದ್ದರು.

HUNTING....


Discover more from Prasarana news

Subscribe to get the latest posts sent to your email.

  • Related Posts

    CRIME NEWS:ಗಾಂಜಾ ಅಮಲಿನಲ್ಲಿದ್ದವನಿಗೆ ಕಾದಿತ್ತು ಶಾಕ್!!
    ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊಂದು ಗಾಂಜಾಸೇವನೆ ಪ್ರಕರಣ…..

    ಹೊಸನಗರ: ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.ನಾಗೋಡಿ ಗ್ರಾಮದ ಮಾಗಲು ನಿವಾಸಿ ಅಜಿತ್ ಕುಮಾರ್ ಎಂ.ಪಿ (28) ಬಂಧಿತ ಆರೋಪಿ. ನಗರ ಠಾಣೆ ಪಿಎಸ್ಐ ಶಿವಾನಂದ್ ವೈ.ಕೆ ಹಾಗೂ ಸಿಬ್ಬಂದಿಗಳಾದ ಎಎಸ್ಐ ಕುಮಾ‌ರ್, ವಿಶ್ವನಾಥ್, ಪ್ರವೀಣ್,…

    Read more

    NAGARA POLICE:ಕಳವು ಪ್ರಕರಣ ಆರೋಪಿ ಬಂಧನ..
    ಒಂದು ಲಕ್ಷ ಮೌಲ್ಯದ ಬಂಗಾರ ಹಾಗೂ ಬೈಕ್ ವಶ…

    ಹೊಸನಗರ: ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಿದ್ದಾರೆ. ಮಾ.03 ರಂದು ತಾಲ್ಲೂಕಿನ ಮತ್ತಿಕೈ ಗ್ರಾಮದ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಅವರು ಸಂಬಂಧಿಕರ ಮನೆಯಲ್ಲಿ ಉಪನಯನ ಕಾರ್ಯಕ್ರಮಕ್ಕೆಂದು ತೆರಳಿದ್ದು ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಬಂದಾಗ ಕಳ್ಳತನ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading