

ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಕಳ್ಳತನ ಪ್ರಕರಣ ಒಂದು ನಡೆದಿದ್ದು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳವು ಮಾಡಲಾಗಿದೆ.

ಶ್ವಾನದಳ ವಾಹನ
ನಿನ್ನೆ ಬೆಳಿಗ್ಗೆ ಮಾರುತಿಪುರ ಗ್ರಾಮದ ಸುಧೀಂದ್ರ ಹೊಳ್ಳ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯಲ್ಲಿ ಯಾರು ಇಲ್ಲದಲ್ಲ ಮನಗಂಡ ಕಳ್ಳರು ಮನೆಯ ಬೀಗ ಮುಗಿದು 60 ಗ್ರಾಂ ತೂಕದ ಎರಡು ನೆಕ್ಲೆಸ್, 10 ಗ್ರಾಂ ತೂಕದ ಮುತ್ತಿನ ಸರ, 36 ಗ್ರಾಂ ತೂಕದ ಬಳೆ,20 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಜುಮಕಿ, 12 ಗ್ರಾಂ ತೂಕದ ಮೂರು ಉಂಗುರ ಒಟ್ಟು 150 ಗ್ರಾಂ ತೂಕದ 9 ಲಕ್ಷ ಮೌಲ್ಯದ ಬಂಗಾರವನ್ನು ಕಳವು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲಿಸಿದ್ದು ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್ ಪ್ರಕರಣ ದಾಖಲಿಸಿದ್ದಾರೆ.
HOSANAGARA:THEFT
Discover more from Prasarana news
Subscribe to get the latest posts sent to your email.