HOSANAGARA:ನಿಸ್ವಾರ್ಥ ಸೇವೆಯನ್ನು ಸಮಾಜ ಸಮಚಿತ್ತದಿಂದ ಸ್ವೀಕರಿಸಬೇಕು: ಮಂಜುನಾಥ್ ಕೆ.ಆರ್

ಬಟ್ಟೆಮಲ್ಲಪ್ಪ: ಸಮಾಜದಲ್ಲಿನ ಉಚಿತ ಸೇವಾ ಚಟುವಟಿಕೆಗಳನ್ನು ಸರ್ವರೂ ಮುಕ್ತವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ನಿಸ್ವಾರ್ಥ ಸೇವಾ ಕಾರ್ಯಗಳ ಮಹತ್ವ ಹೆಚ್ಚಾಗಲು ಸಾಧ್ಯ ಎಂದು ಹರಿದ್ರಾವತಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಕೆ. ಆರ್ ಅಭಿಪ್ರಾಯಪಟ್ಟರು.

ಇಂದು ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಟ್ಟೆಮಲ್ಲಪ್ಪದ  ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಹಯೋಗದಲ್ಲಿ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ ಆಯೋಜಿಸಿದ್ದ 14ನೇ ಉಚಿತ ನೇತ್ರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸೇವಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಬೇಕು ಎಂದರೆ ಜನರು ಸೇವೆಯ ಉಪಯುಕ್ತತೆ ಪಡೆಯಬೇಕು. ಇಂದು ಬಹಳಷ್ಟು ಸಂಘ ಸಂಸ್ಥೆಗಳು ಎಲೆ ಮರೆ ಕಾಯಿಗಳಂತೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಕಳೆದ 15 ವರ್ಷಗಳಲ್ಲಿ 14 ನೇತ್ರ ಶಿಬಿರ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವುದು ಸಂಸ್ಥೆಯ ಅನನ್ಯ ಸಾಧನೆ ಎಂದು ಮಂಜುನಾಥ್ ಕೆ. ಆರ್ ಶ್ಲಾಘಿಸಿದರು.
ಹಿರಿಯರಲ್ಲಿ ಕಣ್ಣಿನ ಜಾಗೃತಿ ಮತ್ತಷ್ಟು ಹೆಚ್ಚಬೇಕು. ಆಗ ಹಿರಿಯರು ಇನ್ನಸ್ಟು ಸ್ವಾಭಿಮಾನದ ಬದುಕು ಕಳೆಯಲು ಸಾಧ್ಯ ಎಂದು ಶ್ರೀ ವ್ಯಾಸ ಮಹರ್ಷಿ ಗುರುಕುಲ ಮಾರ್ಗದರ್ಶಕ, ನಿವೃತ್ತ ಸೇನಾನಿ ಕೆ. ಪಿ. ಕೃಷ್ಣಮೂರ್ತಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಿರಿಯರು ಗೌರವಯುತವಾಗಿ ಬದುಕು ಸಾಗಿಸಲು ಕಣ್ಣು ಬಹಳ ಅಗತ್ಯ. ಕನಿಷ್ಟ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದರಿಂದ ಬೇರೆಯವರ ಮೇಲಿನ ಅವಲಂಬನೆ ತಪ್ಪುತ್ತದೆ. ಹೀಗಾಗಿ ಹಿರಿಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಂತ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. 
ಶಿಬಿರದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ, ವೈದ್ಯಾಧಿಕಾರಿಗಳಾದ ಡಾ.ಗೌತಮ್, ಡಾ. ಸಮ್ಯಕ್, ಡಾ. ದೀಕ್ಷಾ, ನೇತ್ರಾಧಿಕಾರಿ ಡಾ. ಕೃಷ್ಣರಾಜ್, ಗ್ರಾ. ಪಂ. ಸದಸ್ಯರಾದ ಪೂರ್ಣಿಮಾ ಲಕ್ಷ್ಮಣ್, ಸೀತಾ ಸಂತೋಷ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ರಾಘವೇಂದ್ರ, ಆರೋಗ್ಯಾಧಿಕಾರಿ ಸದಾಶಿವಾಪ್ಪ ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಪ್ರಭಾಕರ್ ಸ್ವಾಗತಿಸಿ, ವಂದಿಸಿದರು..

HOSANAGARA


Discover more from Prasarana news

Subscribe to get the latest posts sent to your email.

  • Related Posts

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    DEATH NEWS:ನಿವೃತ್ತ ಪ್ರಾಚಾರ್ಯ ಕೆ ಕರುಣಾಕರ್  ನಿಧನ..

    ಹೊಸನಗರ: ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಕೆ ಕರುಣಾಕರ್ ಇಂದು ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆಪ್ರಸ್ತುತ ಹುಂಚ(ಹುಂಬುಜ) ದಲ್ಲೀ ವಾಸವಿದ್ದ ಇವರು ಸಾಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ತೀರ್ಥಹಳ್ಳಿಯ ಎಸ್ ವಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading