HOSANAGARA:ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಿ: ನ್ಯಾ.ಫಾರೂಖ ಝಾರೆ..

ಹೊಸನಗರ: ಯಾವುದೇ ವಾಹನ ಸವಾರರು ವಾಹನ ಚಲಾಯಿಸುವ ಸಂದರ್ಭದಲ್ಲಿ ಸುರಕ್ಷಿತವಾಗಿರಬೇಕಾದರೆ ಅವರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬೇಕು ಎಂದು ಹೊಸನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಫಾರೂಖ ಝಾರೆ ತಿಳಿಸಿದರು.
ಇಂದು ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಕುರಿತು ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮಾಡುತ್ತಿದೆ.ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಾರೆ ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದುಸೂಚಿಸಿದರು.


ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯತೆ ತೋರದೆ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಬಳಿಕ ಕಡ್ಡಾಯ ಹೆಲ್ಮೆಟ್ ಕುರಿತ ಬೈಕ್ ಚಾಲನೆ ಜಾತಕ್ಕೆ ಚಾಲನೆಯನ್ನು ನೀಡಿದರು ಈ ಸಪ್ತಹ ಕಾರ್ಯಕ್ರಮದಲ್ಲಿ ಹೊಸನಗರ  ಜೆ.ಎಂ.ಎಫ್.ಸಿ  ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಮಾರುತಿ ಶಿಂಧೆ, ವೃತ್ತ ನಿರೀಕ್ಷಕರಾದ ಗುರಣ್ಣ ಹೆಬ್ಬಾರ್, ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್, ಜಾಗೃತಿ ನಾಮಫಲಕ ದಾನಿಗಳಾದ ಶ್ರೀನಿವಾಸ್, ವಿಜೇಂದ್ರ ಸೇಟ್, ಉಪಸ್ಥಿತರಿದ್ದರು ಪೊಲೀಸ್ ಠಾಣಾ ಸಿಬ್ಬಂದಿ ಸಿಬ್ಬಂದಿ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು...

HOSANAGARA.


Discover more from Prasarana news

Subscribe to get the latest posts sent to your email.

  • Related Posts

    MOBILE NETWORK: ತಿಂಗಳೊಳಗೆ ಟವರ್ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ..
    ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು..

    ಹೊಸನಗರ: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಇಂದು ವಾರಂಬಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನ ಬಿಎಸ್ಎನ್ಎಲ್ DJM ಹಾಗೂ ತಾಲೂಕು ದಂಡಾಧಿಕಾರಿಗಳು ಭರವಸೆ ಮರೆಗೆ ಕೈ ಬಿಡಲಾಯಿತು.ಇದಕ್ಕೂ ಮೊದಲು ವಾರಂಬಳ್ಳಿಯಿಂದ ಹೊಸನಗರ ತಾಲೂಕು ಕಚೇರಿ ಅವರಿಗೆ ಪಾದಯಾತ್ರೆ ಮೂಲಕ ಆಗಮಿಸಿದ…

    Read more

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading