DOG BITES:ಹೊಸನಗರದಲ್ಲಿ ಮಿತಿಮೀರಿದ ಬೀದಿ ನಾಯಿ ಹಾವಳಿ..
ಕಳೆದ ಮೂರು ತಿಂಗಳಲ್ಲಿ “394” ನಾಯಿ ಕಡಿದ ಪ್ರಕರಣ…..

ಹೊಸನಗರ:ಹೊಸನಗರ: ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿ ಏರಿಕೆಯಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟು 394 ನಾಯಿ ಕಡಿದ ಪ್ರಕರಣಗಳು ದಾಖಲಾಗಿದೆ.
ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆಯನ್ನು ಪಡೆದಿರುವವರ ಮಾಹಿತಿಯ ಆಧಾರದ ಮೇಲೆ ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು ಈ ದತ್ತಾಂಶಗಳ ಪ್ರಕಾರ ಪ್ರತಿ ತಿಂಗಳು ಸರಾಸರಿ 130ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.
ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಒಳಗಾದವರು ಲಸಿಕೆಯನ್ನು ಪಡೆದಿರುವ ಮಾಹಿತಿಗಳ ಪ್ರಕಾರ 2024 ಡಿಸೆಂಬರ್ ನಲ್ಲಿ 138. 2025ರ ಜನವರಿಯಲ್ಲಿ 126 ಹಾಗೆಯೇ ಫೆಬ್ರವರಿಯಲ್ಲಿ 130 ಮಂದಿ ನಾಯಿ ಕಡಿತಕ್ಕೆ ಲಸಿಕೆಯನ್ನು ಪಡೆದುಕೊಂಡಿದ್ದಾರೆ.ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಪ್ರತಿ ವಾರ್ಡ್ ನಲ್ಲಿಯೂ ನಾಯಿಗಳು ಬೈಕ್ ಸವಾರರು ಸೇರಿದಂತೆ ಸಂಚರಿಸುವವರಿಗೆ ಸಮಸ್ಯೆೆಯಾಗಿ ಪರಿಣಮಿಸಿವೆ. ಹಲವು ಕಡೆಗಳಲ್ಲಿ ಬೀದಿ ನಾಯಿಗಳು ಗುಂಪುಗಳಲ್ಲಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರು ಸಂಚರಿಸಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಪ್ರಮುಖ ಖಾಸಗಿ ಬಸ್ ನಿಲ್ದಾಣ, ಕ್ರೀಡಾಂಗಣ, ಕೆಲ ಮುಖ್ಯ ರಸ್ತೆಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಕಂಡು ಬರುತ್ತಿದ್ದು, ಯಾವ ವಾಹನಗಳು ಆಗಮಿಸಿದರೂ ಅಟ್ಟಿಸಿಕೊಂಡು ಹೋಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಪಟ್ಟಣ ಪಂಚಾಯತ್ ಗೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು  ಒತ್ತಾಯಿಸುತ್ತಿದ್ದಾರೆ. ಆದರೆ ಈ ವರೆಗೂ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಚಿಕಿತ್ಸೆಯಾಗಲಿ ಅಥವಾ ಇನ್ಯಾವುದೇ ನಿಯಂತ್ರಣ ಕ್ರಮವಾಗಲಿ, ಮಾಡದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

# ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ ಬೆಳಗಿನ ಜಾವ ನಮಗೆ ವಾಕಿಂಗ್ ಹೋಗಲು ಕಷ್ಟವಾಗುತ್ತಿದೆ ಎಲ್ಲೆಂದರಲ್ಲಿ ನಾಯಿ ಗಳು ರಸ್ತೆಗಳಲ್ಲಿ ಓಡಾಡುವವರ ಮೇಲೆ ದಾಳಿಯನ್ನು ಮಾಡುತ್ತಿದೆ ಇಷ್ಟಾದರೂ ಅವುಗಳ ನಿಯಂತ್ರಣಕ್ಕೆ ಇಲಾಖೆ ಮುಂದಾಗದಿರುವುದು ಇಲಾಖೆ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ

ನಾಗರಾಜ್ ಪೂಜಾರಿ
ಮೆಸ್ಕಾಂ ಗುತ್ತಿಗೆದಾರರು ಹೊಸನಗರ

# ಬೀದಿ ನಾಯಿಗಳ ಹಾವಳಿಯ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು ಅವುಗಳ ನಿಯಂತ್ರಣಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ ನಾಯಿಗಳ ಸಂತಾನ ಹರಣ ಶಾಸ್ತ್ರ ಚಿಕಿತ್ಸೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಆದೇಶ ಬಂದ ಬಳಿಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ


ಹರೀಶ್ ಎಂ ಏನ್
ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಹೊಸನಗರ.

DOG BITES....


Discover more from Prasarana news

Subscribe to get the latest posts sent to your email.

  • Related Posts

    MOBILE NETWORK: ತಿಂಗಳೊಳಗೆ ಟವರ್ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ..
    ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು..

    ಹೊಸನಗರ: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಇಂದು ವಾರಂಬಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನ ಬಿಎಸ್ಎನ್ಎಲ್ DJM ಹಾಗೂ ತಾಲೂಕು ದಂಡಾಧಿಕಾರಿಗಳು ಭರವಸೆ ಮರೆಗೆ ಕೈ ಬಿಡಲಾಯಿತು.ಇದಕ್ಕೂ ಮೊದಲು ವಾರಂಬಳ್ಳಿಯಿಂದ ಹೊಸನಗರ ತಾಲೂಕು ಕಚೇರಿ ಅವರಿಗೆ ಪಾದಯಾತ್ರೆ ಮೂಲಕ ಆಗಮಿಸಿದ…

    Read more

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading