

ಹೊಸನಗರ:ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಾಣೆಯಾಗಿರುವುದಾಗಿ ಅವರ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ 03-11-2024 ದೂರದ ದಾಖಲಿಸಿದ್ದರು ಇದೀಗ ಕಾಣೆಯಾಗಿದ್ದ ಕೆಪಿಸಿ ಭದ್ರತಾ ಸಿಬ್ಬಂದಿ ಭರತ್ ಅವರ ಮೃತ ದೇಹ ಕಾಣೆಯಾದ 78 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಮವಾರ ಹುಮ್ಮಡಗಲ್ಲು ಮಾಣಿ ಡ್ಯಾಮಿನ ಹಿನ್ನೀರ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಇದ್ದಂತಹ ಮೃತದೇಹವನ್ನು ಕಂಡ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಅ ಮೃತ ದೇಹ ಭರತ್ ಅವರದ್ದೇ ಇರಬಹುದು ಎಂಬ ಸಂದೇಹದ ಮೇಲೆ ಅವರ ಕುಟುಂಬಕ್ಕೆ ಮಾಹಿತಿಯನ್ನು ನೀಡಿ ಬಳಿಕ ನಾಪತ್ತೆಯಾಗಿದ್ದ ಭರತ್ ಅವರ ಪತ್ನಿ ಮೃತ ದೇಹವನ್ನು ನೋಡಿ ಅವರು ಧರಿಸಿರುವ ಬಟ್ಟೆ ಗುರುತಿಸಿ ಇವರು ಕಾಣೆಯಾಗಿದ್ದ ನನ್ನ ಪತಿ ಭರತ್ ಎಂಬುದನ್ನ ಖಚಿತಪಡಿಸಿದ್ದಾರೆ ಅಲ್ಲದೆ ಈ ಸಾವಿನ ಕುರಿತು ಅನುಮಾನವಿದ್ದು ಸೂಕ್ತ ತನಿಖೆ ನಡೆಸುವಂತೆ ದೂರನ್ನು ದಾಖಲಿಸಿದ್ದಾರೆ....
DEAD BODY..
Discover more from Prasarana news
Subscribe to get the latest posts sent to your email.