

ಹೊಸನಗರ:ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) KUWJ - 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ರವರಿಗೆ ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ ವೈ ರಾಘವೇಂದ್ರ ರವರು ಅಭಿನಂದಿಸಿದ್ದಾರೆ.

ಈ ಮೂಲಕ ಅವರು ತಮಗೆ 2011 ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ದಲಿತ ಸಂವೇದನೆ ವರದಿಗಾಗಿ ಜ್ಯೋತಿಬಾಪುಲೆ ಫೆಲೋಶಿಪ್ ಪ್ರಶಸ್ತಿ ದೊರೆತಿದ್ದು, ಅದೇ ರೀತಿ 2017 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೂ ಕೂಡ ತಾವು ಭಾಜನರಾಗಿರುವುದು ನಮ್ಮ ಕಣ್ಮುಂದೆ ಇದೆ.
39ನೇ ರಾಜ್ಯ ಪತ್ರಕರ್ತರ ಸಮ್ಮೇಳನ 2025 ರ ಜನವರಿ 18 ಮತ್ತು 19 ರಂದು ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ತಮಗೆ "ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ" ಯನ್ನು ತಮಗೆ ನೀಡಿ ಗೌರವಿಸಲಾಗಿದೆ. ಅದಕ್ಕಾಗಿ ತಮಗೆ ತುಂಬು ಹೃದಯದ ಅಭಿನಂದನೆಗಳು. ಇದೇ ರೀತಿ ಪತ್ರಿಕಾ ರಂಗದಲ್ಲಿ ತಮ್ಮ ಸೇವೆ ಮುಂದುವರೆದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತಹ ಕೆಲಸಗಳು ತಮ್ಮಿಂದ ಈ ನಾಡಿಗೆ ಆಗಲಿ ಎಂದು ಈ ಸಂದರ್ಭದಲ್ಲಿ ತಮಗೆ ಶುಭ ಹಾರೈಸಿದ್ದಾರೆ.
B.Y.R....
Discover more from Prasarana news
Subscribe to get the latest posts sent to your email.