AIUTUC:STRIKE:ಬಿಸಿಯೂಟ ಸಿಬ್ಬಂದಿ ಗೌರವಧನ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ…

ಹೊಸನಗರ: ಸರ್ಕಾರಿ ಮತ್ತು ಅನುದಾನಿತ ಸೇರಿದಂತೆ ಕಿರಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಊಟ ತಯಾರಕ ಸಿಬ್ಬಂದಿಗಳ ಗೌರವ ಧನವನ್ನು ಹೆಚ್ಚಿಸುವಂತೆ ಆಗ್ರಹಿಸಿ ಇಂದು ಬಿಸಿ ಊಟ ತಯಾರಿಕ ಸಿಬ್ಬಂದಿಗಳು ಪ್ರತಿಭಟನೆಯನ್ನು ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಅಕ್ಷರ ದಾಸೋಹ ಬಿಸಿಊಟ ತಯಾರು ಫೆಡರೇಶನ ರಾಜ್ಯ ಉಪಾಧ್ಯಕ್ಷರಾದ ಪರಮೇಶ್ವರ್ ಕೆ ಹೊಸಕೊಪ್ಪ ಕರ್ನಾಟಕ ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂತಹ ಬಿಸಿಊಟ ಸಿಬ್ಬಂದಿಗಳಿಗೆ ಅತ್ಯಂತ ಕಡಿಮೆ ಗೌರವ ಧನವನ್ನ ನೀಡುತ್ತಿದ್ದು ಅದು ಮುಖ್ಯ ಅಡುಗೆಯವರಿಗೆ ಮಾಸಿಕ 3700 ಹಾಗೂ ಸಹಾಯಕ ಅಡುಗೆ ಸಿಬ್ಬಂದಿಗೆ 3600 ಮಾತ್ರ ಗೌರವಧನವನ್ನು ನೀಡುತ್ತಿದ್ದು ಇದರಿಂದ ಬಿಸಿಊಟ ತಯಾರಕರು ಜೀವನ ನಡೆಸುವುದು ಕಷ್ಟವಾಗಿದೆ ಆದ್ದರಿಂದ 2025 26ನೇ ಸಾಲಿನ ಬಜೆಟ್ ನಲ್ಲಿ ವೇತನ ಕನಿಷ್ಟ 6000 ರೂ ಹೆಚ್ಚಳ ಮಾಡುವುದು ಹಾಗೂ ಮರಣ ಪರಿಹಾರ ಜಾರಿಗೊಳಿಸುವುದು ಅಲ್ಲದೆ ನಿವೃತ್ತರಾದವರಿಗೆ ಇಡುಗಂಟು ಹಣವನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗಳಿಗೆ ಏರಿಸುವುದು ಸೇರಿ ಇನ್ನಿತರ ಬೇಡಿಕೆಗಳನ್ನ ಬಜೆಟ್ ನಲ್ಲಿ ಜಾರಿಗೊಳಿಸಬೇಕು ಅಲ್ಲದೆ ಕೆಲವು ಶಾಲೆಗಳಲ್ಲಿ ಬಿಸಿ ಊಟ ತಯಾರಿಕರಿಗೆ ವಿನಾಕಾರಣ ಕಿರುಕುಳವನ್ನು ನೀಡಲಾಗುತ್ತಿದ್ದು ಕೆಲಸದಿಂದ ತೆಗೆದಂತಹ ಪ್ರಕರಣಗಳು ನಡೆದಿದ್ದು ಶಾಲೆಗಳಲ್ಲಿ ಅಡುಗೆಯವರು ತಮ್ಮ ಕರ್ತವ್ಯದಲ್ಲಿ ಲೋಪವನ್ನು ಎಸೆಗಿದ್ದರೆ ಅಂತವರಿಗೆ ನೋಟಿಸ್ ನೀಡುವ ಮೂಲಕ ವಿವರಣೆ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಹೊರತಾಗಿ ಏಕಪಕ್ಷಿಯವಾಗಿ ಅಡುಗೆಯವರನ್ನು ಕೆಲಸದಿಂದ ವಜಗೊಳಿಸಬಾರದು ಅಲ್ಲದೆ 2024 ಬರಗಾಲ ಕಾರ್ಯಕ್ರಮದ ವೇತನವನ್ನು ಶೀಘ್ರ ಬಿಡುಗಡೆಗೊಳಿಸಿಕೊಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಪ್ರತಿಭಟನೆ ಯಲ್ಲಿ ತಾಲೂಕು ಫೆಡರೇಶನ್ ಅಧ್ಯಕ್ಷ ರಾದ ಸುಶೀಲಾ, ವನಜಾ ಬೇಳೂರು,ಶಕೀಲಾ,ರೂಪ ನೇತ್ರಾ ಮುಂತಾದವರು ಪಾಲ್ಗೊಂಡದ್ದರು.

AIUTUC:STRIKE...


Discover more from Prasarana news

Subscribe to get the latest posts sent to your email.

  • Related Posts

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    DEATH NEWS:ನಿವೃತ್ತ ಪ್ರಾಚಾರ್ಯ ಕೆ ಕರುಣಾಕರ್  ನಿಧನ..

    ಹೊಸನಗರ: ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಕೆ ಕರುಣಾಕರ್ ಇಂದು ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆಪ್ರಸ್ತುತ ಹುಂಚ(ಹುಂಬುಜ) ದಲ್ಲೀ ವಾಸವಿದ್ದ ಇವರು ಸಾಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ತೀರ್ಥಹಳ್ಳಿಯ ಎಸ್ ವಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading