

ಹೊಸನಗರ: ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ನಗರ ಹೋಬಳಿಯ ಪ್ರಜ್ವಲ್ ಹಿರಿಮನೆ ಅವರನ್ನು ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಉಳೆಗದ್ದೆ ದೇವೇಂದ್ರಪ್ಪ ಗೌಡ. ಪ್ರಜ್ವಲ್ ಅವರ ಈ ಸಾಧನೆ ಒಕ್ಕಲಿಗ ಸಮುದಾಯಕ್ಕೆ ಹೆಮ್ಮೆಯನ್ನು ತರುವಂತಹದ್ದು ಅವರ ಶ್ರಮ ಹಾಗೂ ಅವರ ಪೋಷಕರ ಬೆಂಬಲ ಇದಕ್ಕೆ ಕಾರಣವಾಗಿದ್ದು ಈ ಸಂದರ್ಭದಲ್ಲಿ ನಾವು ಅವರನ್ನ ಸಹ ಅಭಿನಯಿಸುತ್ತೇವೆ ಎಂದರು ಅಲ್ಲದೆ ಪ್ರಜ್ವಲ್ ಅವರ ಮುಂದಿನ ಶೈಕ್ಷಣಿಕ ಬದುಕು ಇನ್ನಷ್ಟು ಉಜ್ವಲವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದರು ಈ ಸಂದರ್ಭದಲ್ಲಿ
ತಾಲೂಕು ಒಕ್ಕಲಿಗರ ಸಂಘದ, ಕಾರ್ಯದರ್ಶಿ ಕೃಷ್ಣಮೂರ್ತಿ ಮಠದ ಜಡ್ಡು ನಿರ್ದೇಶಕರಾದ ಸುಮಾ ಸುಬ್ರಮಣ್ಯ,ಜಯಶೀಲ ಗೌಡ, ರಾಜೇಶ್ ಟೆಂಕಬೈಲ್,ರತ್ನಾಕರ್ ಮಲೇಬೈಲ್, ಜ್ಯೋತಿ ಪೂರ್ಣೇಶ್, ಮೈನಾವತಿ ರಾಜಮೂರ್ತಿ ಹಾಗೂ ರಮೇಶ್ ಹಲಸಿನಹಳ್ಳಿ, ವಿನಾಯಕ ಚಕ್ಕಾರು, ಸತೀಶ್ ಮಳಲಿ, ಪ್ರಜ್ವಲ್ ಪೋಷಕರು ಮತ್ತು ಸ್ಥಳೀಯರು ಇದ್ದರು...
SECOND P U C:
Discover more from Prasarana news
Subscribe to get the latest posts sent to your email.