108 AMBULANCE:ಶೆಡ್ ಸೇರಿದ 108 ಅಂಬುಲೆನ್ಸ್ ವಾಹನ…
ಪ್ರತಿಭಟಿಸಿದರು ದುರಸ್ತಿಯಾಗಲಿಲ್ಲ ಆರೋಗ್ಯ ಕವಚ…

ನಗರ: ತುರ್ತು ಚಿಕಿತ್ಸೆಗಾಗಿ ಆರಂಭವಾದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಕವಚ 108 ಅಂಬುಲೆನ್ಸ್ ಸೇವೆ ನಗರ ಹೋಬಳಿಗೆ ಮರೀಚಿಕೆಯಾಗಿದೆ ತುರ್ತು ವಾಹನ ದುರಸ್ತಿಗೆ ಬಂದು ತಿಂಗಳುಗಲೇ  ಕಳೆದಿದೆ ನಿತ್ಯ ನೂರಾರು ರೋಗಿಗಳು ಹಾಗೂ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ನಗರ ಭಾಗದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಅಲ್ಲಿ 108 ಆಂಬುಲೆನ್ಸ್ ಸೇವೆ ನಿರಂತರವಾಗಿ ಬೇಕಿದೆ ಆದರೆ ವಾಹನ ದುರಸ್ತಿಯಾಗದೆ ಶೆಡ್ ಸೇರಿರುವುದು ವಿಪರ್ಯಾಸ...
ತುರ್ತು ಸಂದರ್ಭದಲ್ಲಿ 108 ಸೇವೆ ದೊರೆಯದೇ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಆರೋಗ್ಯ ಇಲಾಖೆ ಮಾತ್ರ ಮೌನವಹಿಸಿದೆ. ನಗರ ಹೋಬಳಿ ಬಗ್ಗೆ ಇಲಾಖೆಗೆ ಇಷ್ಟೊಂದು ನಿರ್ಲಕ್ಷ್ಯವೇಕೆ ಎಂಬುದು ಪ್ರಶ್ನೆ ಸ್ಥಳಿಯ ರಲ್ಲಿ ಮೂಡಿದೆ   ಮೊದಲಿಂದಲೂ 108 ಆಂಬುಲೆನ್ಸ್‌ ಸೌಕರ್ಯ  ಈ ಭಾಗಕ್ಕೆ ಮರೀಚಿಕೆ ಎನಿಸಿದ್ದು ಅಪಘಾತ, ಹೆರಿಗೆ ಸೇರಿ ತುರ್ತು ಸಂದರ್ಭಗಳಲ್ಲಿ ಆರೋಗ್ಯ ರಕ್ಷಾ ಕವಚದ ಸೇವೆ ದೊರೆಯದೆ ಹಲವು ಬಾರಿ ರೋಗಿಗಳಿಗೆ ತೊಂದರೆ ಯಾದ ನಿದರ್ಶನಗಳು ನಿರಂತರವಾಗಿ ವರದಿಯಾಗುತ್ತಲೇ ಇದ್ದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ...


ಈ ಹಿಂದೆ ಅಂಬ್ಯುಲೆನ್ಸ್ ಸೇವೆ ಸರಿ ಪಡಿಸುವಂತೆ ನಗರ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ಕುಳಿತ ಸಂದರ್ಭದಲ್ಲಿ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿ ಅಂಬ್ಯುಲೆನ್ಸ್ ಸೇವೆ ಸರಿ ಪಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು. ಈ ವರೆಗೂ ಅಂಬ್ಯುಲೆನ್ಸ್ ಸರಿ ಪಡಿಸಿಲ್ಲ. ಕೂಡಲೆ ವಾಹನ ವನ್ನಾ ದುರಸ್ತಿ ಮಾಡಿ ಸೇವೆಗೆ ಅನುವನ್ನ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ...

108 AMBULANCE.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading