

ಹೊಸನಗರ: ಧೀರ ದೀವರ ಸಂಘ ಬಟ್ಟೆ ಮಲ್ಲಪ್ಪ ಇದರ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದಿನಾಂಕ 09-03-2025ರಂದು ಬಟ್ಟೆಮಲಪ್ಪ ದ ಆಲಗೇರಿ ಮಂಡ್ರಿ ಚೆನ್ನಮ್ಮಾಜಿ ಪ್ರೌಡ ಶಾಲೆ ಆವರಣದಲ್ಲಿ ದೀವರ ಸುಗ್ಗಿ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಾಾಕನಕಟ್ಟೆ ಗಣಪತಿ ತಿಳಿಸಿದರು.
ಹೊಸನಗರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದವರು ದೀವರ ಸಮಾಜ ಸಂಘಟನಾತ್ಮಕ ವಾಗುವುದರ ಜೊತೆಗೆ ನಮ್ಮ ಸಮುದಾಯದ ಜನಪದ ಕ್ರೀಡೆಗಳಾದ ಹಸೆ, ಚಿತ್ತಾರ, ಜೊತೆಗೆ ಜನಾಂಗದ ವಿಶೇಷ ಮಹತ್ವವನ್ನು ಸಾರುವ ಅಂಟಿಕೆ ಪಿಂಟಿಕೆ, ಕೋಲಾಟ, ಸೋಬಾನೆ ಪದ, ಭೂಮಿ ಹುಣ್ಣಿಮೆ ಕುಕ್ಕೆ ಪ್ರದರ್ಶನ, ಹಾಗೂ ದೀವರ ಸಂಸ್ಕೃತಿಯನ್ನು ಇಂದಿನ ಜನಾಂಗದ ಯುವ ಸಮೂಹಕ್ಕೆ ಪರಿಚಯಿಸುವ ಉದ್ದೇಶ ಈ ಸುಗ್ಗಿ ಹಬ್ಬದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮುದಾಯದ ಹಿರಿಯ ಚೇತನ ಮಾಜಿ ಸಚಿವ ಡಾ. ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಿದ್ದು ಜೊತೆಗೆ ಸಮುದಾಯದ ಗ್ರಾಮೀಣ ಪ್ರತಿಭೆಗಳನ್ನು ಪುರಸ್ಕರಿಸಲಿದ್ದೇವೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರೇಣುಕಾ ನಂದ ಸ್ವಾಮೀಜಿಯವರು ಶ್ರೀ ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರು ಹಾಗೆ ಶ್ರೀ ಯೋಗೇಂದ್ರ ಅವಧೂತ ಶ್ರೀಗಳು ಶ್ರೀ ಕ್ಷೇತ್ರ ಕಾರ್ತಿಕೇಯಪೀಠ ಸಾರಗನ ಜಡ್ಡು ಮತ್ತು ಡಾ. ರಾಮಪ್ಪನವರು ಧರ್ಮದರ್ಶಿಗಳು ಶ್ರೀ ಕ್ಷೇತ್ರ ಸಿಗಂದೂರು ವಹಿಸಲಿದ್ದು ಕ್ಷೇತ್ರದ ಜನಪ್ರಿಯ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಉದಯ್ ನಾಯ್ಕ, ಉಪಾಧ್ಯಕ್ಷ ರಮೇಶ್ ಕಾಡಳ್ಳಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಅತಿಗಾರ್, ಕಾರ್ಯದರ್ಶಿ ಕುಮಾರ ಕೊಗ್ರೆ, ಸಹ ಕಾರ್ಯದರ್ಶಿ ಕಾಪಿ ಮಹೇಶ್, ನಿರ್ದೇಶಕರಾದ ನಂಜವಳ್ಳಿ ನಾರಿ ರವಿ, ಹೀಲಗೋಡು ಮಂಜಪ್ಪ, ದೇವರಹೊನ್ನೆಕೊಪ್ಪ ಶೇಖರಪ್ಪ, ಘಂಟಿನಕೊಪ್ಪ ಸಂತೋಷ ಕುಮಾರ್, ಗದ್ದೆಮನೆ ಸಚಿನ್ ಕುಮಾರ್, ಹರತಾಳು ಶಶಿಕುಮಾರ್, ಕತ್ರಿಕೊಪ್ಪ ಶಿವಕುಮಾರ್, ಗುಡೋಡಿ ರಾಘವೇಂದ್ರ, ಹುರಕ್ಕಿ ಲಕ್ಷ್ಮಣ, ಅರಗೋಡಿ ರಾಘವೇಂದ್ರ, ನಂಜವಳ್ಳಿ ಮಂಜುನಾಥ ಕಿಪಡಿ, ದಣಂದೂರು ಕುಮಾರ್ ಮಂಡಿ ಮೊದಲಾದವರು ಇದ್ದರು.
SUGGI HABBA....
Discover more from Prasarana news
Subscribe to get the latest posts sent to your email.