

ಹೊಸನಗರ: ಸಹಕಾರಿ ಕ್ಷೇತ್ರದಲ್ಲಿ ಕಾಯ್ದೆಗಳು ಆಗಾಗ ತಿದ್ದುಪಡಿಯಾಗುತ್ತಿರುತ್ತದೆ ಇವುಗಳ ಬಗ್ಗೆ ಸಹಕಾರಿ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಲ್ಲಿ ಅರಿವಿರಬೇಕು ಆಗ ಮಾತ್ರ ಒಂದು ಸಹಕಾರಿ ಸಂಸ್ಥೆ ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ತಿಳಿಸಿದರು. ಸೋಮವಾರ ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಯಮಿತ ಹೊಸನಗರ ಇದರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದವರು
90ರ ದಶಕದಲ್ಲಿ ಬೆಳೆ ಸಾಲಗಳಿಗೆ ಶೇ.20 ರಷ್ಟು ಬಡ್ಡಿದರವಿತ್ತು. ಬಳಿಕ ಹಂತ ಹಂತವಾಗಿ ಕಡಿಮೆಯಾಗಿ ಪ್ರಸ್ತುತ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ದೊರೆಯುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಸಾಲ ದೊರೆಯುತ್ತಿದೆ. ಆದಾಗ್ಯೂ ರೈತರು ಖಾಸಗಿ ಸಂಸ್ಥೆಗಳಲ್ಲಿ ಅಧಿಕ ಬಡ್ಡಿ ದರದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು.
ನಬಾರ್ಡ್ ನೀಡುತ್ತಿದ್ದ ಪುನರ್ಧನದ ಮೊತ್ತವನ್ನು ಕಡಿತಗೊಳಿಸಿದೆ. ಆದರೆ ಸಾಕಷ್ಟು ಹಿಂದೆಯೇ ಎಲ್ಲಾ ಸಹಕಾರಿ ಸಂಸ್ಥೆಗಳೂ ಸ್ವಂತ ಬಂಡವಾಳ ಹೊಂದಬೇಕು ಎಂದು ಸೂಚನೆ ನೀಡಲಾಗಿತ್ತು. 2006ರಲ್ಲಿ ವೈದ್ಯನಾಥನ್ ವರದಿ ಶಿಫಾರಸ್ಸಿನಂತೆ ನಷ್ಟದಲ್ಲಿರುವ ಸಹಕಾರಿ ಸಂಘಗಳಿಗೆ ಆರ್ಥಿಕ ಚೇತರಿಕೆ ನೀಡಿತ್ತು. ಆದರೆ ಮುಂಬರುವ ದಿನಗಳಲ್ಲಿ ಮತ್ತೆ ನಷ್ಟದತ್ತ ಸಾಗುವುದಿಲ್ಲ ಎಂಬ ಭರವಸೆ ಪಡೆಯಲಾಗಿತ್ತು. ಆದರೆ ಇಂದು ಹಲವು ಸಂಸ್ಥೆಗಳು ಮತ್ತೆ ನಷ್ಟಕ್ಕೆ ಸಿಲುಕಿರುವುದಕ್ಕೆ ಕಾರಣ ಸ್ವಂತ ಬಂಡವಾಳದ ಕೊರತೆ ಎಂದರು.
ಸಮಯ ಪರಿಪಾಲನೆ ಯಶಸ್ಸಿನ ಗುಟ್ಟು. ಸಂಸ್ಥೆಯ ಉದ್ಯೋಗಿಗಳು, ಆಡಳಿತ ಮಂಡಳಿ ಸದಸ್ಯರು ಸಕಾಲದಲ್ಲಿ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಎಷ್ಟೋ ಸದಸ್ಯರಿಗೆ ಸಂಸ್ಥೆಯ ಬೈಲಾ ಹಾಗೂ ನಿಯಮಗಳ ಅರಿವೇ ಇರುವುದಿಲ್ಲ. ಇದು ಸಂಸ್ಥೆಯ ಏಳಿಗೆಗೆ ಮಾರಕ. ಸಹಕಾರಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ರಾಜಕೀಯ, ಜಾತಿ ಹಾಗೂ ಲಿಂಗ ತಾರತಮ್ಯವನ್ನು ದೂರವಿಡುವುದು ಉತ್ತಮ ಎಂದು ಸಲಹೆ ನೀಡಿದರು.
ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ರಾಮೇಶ್ವರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಡಿ.ಆರ್.ವಿನಯಕುಮಾರ್, ಪ್ರಮುಖರಾದ ಹರತಾಳು ನಾಗರಾಜ್, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ.ಪರಮೇಶ್, ಕಲ್ಯಾಣಪ್ಪಗೌಡ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕರಾದ ಹಾಲಪ್ಪ, ಸಹಕಾರಿ ಸಂಘಗಳ ಪ್ರಬಂಧಕ ಸತೀಶ್ಕುಮಾರ್, ಪರಮೇಶ್ವರಪ್ಪ, ಡಿ.ಸಿ.ಸಿ ಬ್ಯಾಂಕ್ ಕ್ಷೇತ್ರಾಧಿಕಾರಿಗಳು ಮತ್ತಿತರರು ಇದ್ದರು...
SPECIAL TRAINING..
Discover more from Prasarana news
Subscribe to get the latest posts sent to your email.