

ಸಾಗರ: ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನಿರಿನಲ್ಲಿ ನಿನ್ನೆ ದುರ್ಘಟನೆ ಯೊಂದು ನಡೆದಿದ್ದು ಊಟಕ್ಕೆಂದು ತೆಪ್ಪದ ಮೂಲಕ ಒಂದು ದಡದಿಂದ ಇನ್ನೊಂದು ದಡಕ್ಕೆ ತೆರಳಿದ್ದ ಐವರ ಪೈಕಿ ಮೂವರು ಹಿಂದಿರುಗುವಾಗ ನೀರು ಪಾಲಾದ ಘಟನೆ ನಡೆದಿದೆ.
ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರ ಮೂಲದ ಐವರು ಯುವಕರು ಕಳಸವಳ್ಳಿ ಬದಿಯ ಹಿನ್ನೀರಿಗೆ ತೆರಳಿದ್ದಾರೆ. ಅಲ್ಲಿಯೇ ದಡದಲ್ಲಿದ್ದ ತೆಪ್ಪವನ್ನು ಬಳಸಿ ಹಿನ್ನೀರಿನ ಇನ್ನೊಂದು ಬದಿಗೆ ಹೋಗಿದ್ದಾರೆ.

ಯುವಕರು ಅಲ್ಲಿಯೇ ಊಟ ಮಾಡಿ. ಅಲ್ಲಿಂದ ವಾಪಸ್ ಬರುವಾಗ ತೆಪ್ಪದ ಒಳಗೆ ನೀರು ನುಗ್ಗಲು ಆರಂಭವಾಗಿದೆ. ಪರಿಣಾಮ ತೆಪ್ಪದಲ್ಲಿದ್ದವರು ಮುಳುಗುವಂತಾಗಿದೆ. ಆಗ ಐವರ ಪೈಕಿ ಇಬ್ಬರು ಈಜಿಕೊಂಡು ದಡಕ್ಕೆ ಬಂದಿದ್ದಾರೆ. ಉಳಿದ ಮೂವರು ನೀರಿನಲ್ಲಿ ಮುಳುಗಿದ್ದಾರೆ.
ನೀರಿನಲ್ಲಿ ಮುಳುಗಿದವರನ್ನ ಚೇತನ್, ರಾಜು, ಸಂದೀಪ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಓರ್ವ ಗೇಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನಿಬ್ಬರು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮುಳುಗಿದವರಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರಿಂದ ಹುಡಕಾಟ ನಡೆಯುತ್ತಿದೆ, ಕತ್ತಲು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮತ್ತೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ.
SHARAVATI BACKWATER
Discover more from Prasarana news
Subscribe to get the latest posts sent to your email.