

ರಿಪ್ಪನ್ ಪೇಟೆ:ಈ ಬಾರಿಯ ಮಳೆಗಾಲದ ಕೆಂಚನಾಲ ಮಾರಿಕಾಂಬ ಜಾತ್ರಾ ಮಹೋತ್ಸವ ಭಕ್ತ ಸಾಗರದೊಂದಿಗೆ ಅತ್ಯಂತ ಭಕ್ತಿ ಭಾವಪೂರ್ಣವಾಗಿ ನಡೆಯಿತು. ಮಂಗಳವಾರ ನಡೆದ ಜಾತ್ರೆಗೆ ಜಿಲ್ಲೆ, ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ವರ್ಷಕ್ಕೆ ಎರಡು ಬಾರಿ ನಡೆಯುವ ಈ ಜಾತ್ರೆ — ಮಳೆಗಾಲದಲ್ಲಿ ಮಂಗಳವಾರ ಮತ್ತು ಬೇಸಿಗೆಯಲ್ಲಿ ಬುಧವಾರ ನಡೆಯಲಿದೆ. ಕೆಂಚನಾಲ ಗ್ರಾಮದಲ್ಲಿ ನಡೆಯುವ ಈ ಜಾತ್ರೆ ಜನ ಜೀವನದ ಒಂದು ಮೂಲಭೂತ ಭಾಗವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಮಾರಿಕಾಂಬ ದೇವಾಲಯವು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಭಕ್ತಿ-ಶ್ರದ್ಧೆಗಳ ಪ್ರಮುಖ ಕೇಂದ್ರವಾಗಿದೆ.
ಭಕ್ತರ ನಡುವೆ ದೇವಿಯ ಬಗ್ಗೆ ಅಚಲವಾದ ನಂಬಿಕೆ ಇದ್ದು ಅವರು ಮಾಡಿದ ಹರಿಕೆಗಳು ದೇವಿಯ ಕೃಪೆಯಿಂದ ಈ ಡೇರುತ್ತವೆ ಎಂಬ ನಂಬಿಕೆಯಿಂದ ಕೃಷಿಯ ರಕ್ಷಣೆ, ಆರೋಗ್ಯ ಸಮಸ್ಯೆಗಳಿಂದ ಮುಕ್ತಿ, ಕುಟುಂಬದ ನೆಮ್ಮದಿ ಹಾಗೂ ಸಮಾಜದಲ್ಲಿ ಶಾಂತಿಗಾಗಿ ದೇವಿಗೆ ಹರಿಕೆ ಮಾಡುತ್ತಾರೆ.
ಮಜರಾಯಿ ಇಲಾಖೆಯ ಮೇಲುಸ್ತುವಾರಿಯಲ್ಲಿ, ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯತಿಯ ಸಹಕಾರದಿಂದ ಮೂರು ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಇಂದು ಮುಂಜಾನೆಯಿಂದಲೇ ಸುರಿಯುತ್ತಿದ್ದ ಮಳೆಯ ನಡುವೆಯೂ ವಯೋವೃದ್ಧರು, ಮಹಿಳೆಯರು, ಪುರುಷರು, ಯುವಕರು ಹಾಗೂ ಮಕ್ಕಳು ದೇವಿದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು.
ದೇವಿಯ ಕೃಪೆಯಿಂದ ಲಕ್ಷಾಂತರ ಭಕ್ತರು ಒಳಿತನ್ನು ಕಂಡಿರುವುದಾಗಿ ಹಾಗೂ ದೇವಿಯ ಆಶೀರ್ವಾದವನ್ನು ನಂಬಿದವರ ಹರಿಕೆಗಳು ನಿರ್ಭೀತಿಯಿಂದ ಈಡೇರಿರುವ ಅನೇಕ ಉದಾಹರಣೆಗಳು ಜನಮನ್ನಣದಲ್ಲಿ ಮನೆಮಾಡಿವೆ. ಈ ಜಾತ್ರೆ ಶ್ರದ್ಧೆ, ಸಂಸ್ಕೃತಿ ಮತ್ತು ಸಾಂಘಿಕ ಭಾವನೆಗಳ ಸಮಾಗಮವಾಗಿದೆ.
RIPPONPET NEWS..
Discover more from Prasarana news
Subscribe to get the latest posts sent to your email.