REPUBLIC DAY:ಸಂವಿಧಾನದ ಆಶಯಗಳಿಗೆ ಚ್ಯುತಿಬಾರದಂತೆ ನಡೆದುಕೊಳ್ಳಿ; ತಹಶೀಲ್ದಾರ್ ರಶ್ಮಿ ಹಾಲೇಶ್…


ಹೊಸನಗರ;  ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟç ಭಾರತ. ನಮ್ಮ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರೀಕನಿಗೆ ಮೂಲಭೂತ ಹಕ್ಕುಗಳ ಜೊತೆಜೊತೆಗೆ ಒಂದಿಷ್ಟು ಕರ್ತವ್ಯಗಳನ್ನು ನೀಡಿದೆ. ಅವುಗಳಿಗೆ ಚ್ಯುತಿದಾರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು.
ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮತಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾಲಾನುಸಾರ ಕಾಯ್ದೆಗಳ ತಿದ್ದುಪಡಿಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ದೇಶದ ಕಾನೂನು, ಕಾಯ್ದೆಗಳ ಬಗ್ಗೆ ಗೌರವಿಸುವ ಮುನ್ನ ವಿಶ್ವ ಬೇರೆ ರಾಷ್ಟçಗಳ ಕಾನೂನು ಕಟ್ಟಳೆ ಕುರಿತು ನಾವೆಲ್ಲ ಮೊದಲು ತಿಳಿಯಬೇಕು. ಸಂವಿಧಾನದಿAದ ನಾವೆಲ್ಲಾ ಸರ್ವ ಸ್ವತಂತ್ರö್ಯರಾಗಿದ್ದು ನಮ್ಮ ರಾಷ್ಟಿçÃಯ ಹಬ್ಬವಾದ ಗಣರಾಜ್ಯೋತ್ಸವಕ್ಕೆ ಬಹುಮುಖಿ ಮಹತ್ವವಿದೆ. ಕಾರಣ, ದೇಶದ ಸರ್ವೋಚ್ಛ ಕಾನೂನಾದ ಸಂವಿಧಾನ ಕುರಿತು ನಮ್ಮ ಹಿರಿಯರು ಆಳವಾದ ಅಧ್ಯಯನದ ಬಳಿಕ ಜಾರಿಗೊಳಿಸಿದ್ದಾರೆ. ಸಂವಿಧಾನವು ನ್ಯಾಯ, ಸ್ವತಂತ್ರö್ಯ, ಸಮಾನತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಆದರ್ಶಗಳಿಗೆ ಮಾನ್ಯತೆ ನೀಡಿದೆ ಎಂದರು.
ಇದಕ್ಕೂ ಮೊದಲು ವಿವಿಧ ಶಾಲಾ ವಿದ್ಯಾರ್ಥಿಗಳು, ಪೊಲೀಸ್ ಹಾಗೂ ಗೃಹ ಇಲಾಖೆ ಪ್ಲಟೂನ್‌ಗಳು ಆರ್ಕರ್ಷಕ ಪಥ ಸಂಚಲನದ ಮೂಲಕ ರಾಷ್ಟç ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ, ಮಕ್ಕಳಿಂದ ಹಲವು ಮನರಂಜನೆ ಕಾರ್ಯಕ್ರಮಗಳು ಜರುಗಿತು. ಅಗ್ನಿ ಅವಗಢ ಸಂದರ್ಭದಲ್ಲಿ ಮುಂಜಾಗ್ರತೆ ಕುರಿತಂತೆ ಜನತೆ ಕೈಗೊಳ್ಳ ಬೇಕಾದ ಕ್ರಮಗಳನ್ನು ಅಗ್ನಿಶಾಮಕ ದಳ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರ್ಪಡಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ಅಧಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಅಶ್ವಿನಿ ಕುಮಾರ್, ಕೃಷ್ಣವೇಣ , ಗಾಯತ್ರಿ, ಬಿಇಒ ಹೆಚ್.ಆರ್. ಕೃಷ್ಣಮೂರ್ತಿ, ಇಒ ನರೇಂದ್ರ ಕುಮಾರ್, ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ಪಿಎಸ್‌ಐ ಶಂಕರಗೌಡ ಪಾಟೀಲ, ಸಿಂಥಿಯಾ, ಗುಲಾಬಿ, ನೇತ್ರಾವತಿ ಭಟ್, ಅಬಕಾರಿ ನಿರೀಕ್ಷಕ ನಾಗರಾಜ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಡಿ ಸೋಮಶೇಖರ್, ರಾಷ್ಟಿçÃಯ ಹಬ್ಬಗಳ ಸಮಿತಿ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಆಶ್ರಯ ಸಮಿತಿ ಸದಸ್ಯೆ ರಾಧಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕರಾದ ಡಾ. ಅಂಜಲಿ ಅಶ್ವಿನಿ ಕುಮಾರ್ ಹಾಗೂ ಧನಂಜಯ ನಿರೂಪಿಸಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್ ವಂದಿಸಿದರು...

REPUBLIC DAY..


Discover more from Prasarana news

Subscribe to get the latest posts sent to your email.

  • Related Posts

    MOBILE NETWORK: ತಿಂಗಳೊಳಗೆ ಟವರ್ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆ..
    ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು..

    ಹೊಸನಗರ: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಇಂದು ವಾರಂಬಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನ ಬಿಎಸ್ಎನ್ಎಲ್ DJM ಹಾಗೂ ತಾಲೂಕು ದಂಡಾಧಿಕಾರಿಗಳು ಭರವಸೆ ಮರೆಗೆ ಕೈ ಬಿಡಲಾಯಿತು.ಇದಕ್ಕೂ ಮೊದಲು ವಾರಂಬಳ್ಳಿಯಿಂದ ಹೊಸನಗರ ತಾಲೂಕು ಕಚೇರಿ ಅವರಿಗೆ ಪಾದಯಾತ್ರೆ ಮೂಲಕ ಆಗಮಿಸಿದ…

    Read more

    OWNERSHIP:ಮೂಲ ಮಾಲೀಕರಿಗೆ ನಿವೇಶನದ ಮಾಲೀಕತ್ವ ನೀಡಬೇಕು: ಅಶ್ವಿನಿ ಕುಮಾರ್..

    ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರುಹೊಸನಗರ ಪಟ್ಟಣ ಪಂಚಾಯಿತಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading