
ಹೊಸನಗರ: ಪಟ್ಟಣದ ಬಸ್ ಸ್ಟ್ಯಾಂಡ್ ಸೇರಿ ಪ್ರಮುಖ ಬೀದಿಗಳಲ್ಲಿ ಅಡ್ಡಾಡುವ ಬೀಡಾಡಿ ದನಗಳ ಕೊರಳಿಗೆ ಬಿಜೆಪಿ ಮುಖಂಡರಾದ ಹಾಲಗದ್ದೆ ಉಮೇಶ್ ನೇತೃತ್ವದ ತಂಡ ಗುರುವಾರ ರಾತ್ರಿ ನೂರಕ್ಕೂ ಹೆಚ್ಚು ರೇಡಿಯಮ್ ಕೊರಳಪಟ್ಟಿ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀಡಾಡಿ ದನಗಳು ಹಾಗೂ ವಾಹನಗಳ ನಡುವೆ ಅಪಘಾತಗಳು ಸಂಭವಿಸುತ್ತಿದ್ದು ಈ ರೀತಿಯ ರೇಡಿಯಮ್ ಬೆಲ್ಟ್ ಗಳನ್ನ ಹಾಕುವುದರಿಂದ ಅಪಘಾತಗಳನ್ನು ತಪ್ಪಿಸುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ.

ರಾತ್ರಿ ವೇಳೆ ರಸ್ತೆ ಯುದ್ಧಕ್ಕೂ ಬೀಡಾಡಿ ದನಗಳು ಮಲಗಿರುತ್ತವೆ ಅಲ್ಲದೆ ಮಂಗಳೂರು, ಕೊಲ್ಲೂರು, ಸಿಗಂದೂರ್ ಅಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ರಸ್ತೆ ಆದುದರಿಂದ ಇಲ್ಲಿ ನಿತ್ಯ ಹಲವಾರು ವಾಹನಗಳು ಓಡಾಟವನ್ನು ನಡೆಸುತ್ತಿರುತ್ತವೆ ಈ ಪ್ರಯತ್ನದಿಂದ ವಾಹನಸವರು ಸಹ ಸುರಕ್ಷಿತವಾಗಿರುತ್ತಾರೆ ಹಾಗೂ ಗೋವುಗಳು ಗಾಯಗೊಳ್ಳುವುದು ಹಾಗೂ ಸಾವನ್ನಪ್ಪುದನ್ನ ತಪ್ಪಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಮುಖಂಡರಾದ ಹಾಲಗದ್ದೆ ಉಮೇಶ್ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷಧ ಪ್ರಮುಖರಾದ ಮಹೇಂದ್ರ, ಆಟೋ ಕುಮಾರ್, ಕಾರ್ತಿಕ್ ಭಂಡಾರಿ. ಪಾನಿಪುರಿ ಸುಭಾಷ್, ಸುಮಿತ್,ಪವನ್, ನಿರಂಜನ್,ಶಶಾಂಕ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು...
RADIUM NECK BELT
Discover more from Prasarana news
Subscribe to get the latest posts sent to your email.