

ಹೊಸನಗರ: ತರಬೇತಿ ವೇಳೆ ಪ್ಯಾರಾಚೂಟ್ ಅಪಘಾತದಿಂದ ಹುತಾತ್ಮರಾದ ವಾರಂಟ್ ಆಫೀಸರ್ ಜಿಎಸ್ ಮಂಜುನಾಥ್ ಅವರ ನಿಧನಕ್ಕೆ ಇಡೀ ಮಲೆನಾಡು ಕಂಬನಿ ಮಿಡಿದಿದೆ.
ಮಂಜುನಾಥ್ ರವರ ಪಾರ್ಥಿವ ಶರೀರ ಮುಂಜಾನೆ11.30 ಕ್ಕ್ ಸೇನಾ ವಾಹನದಲ್ಲಿ ಹೊಸನಗರ ಪಟ್ಟಣವನ್ನ ಪ್ರವೇಶಿಸಿತು ಅವರ ಪಾರ್ಥಿವ ಶರೀರ ಆಗಮನಕ್ಕು ಮುನ್ನವೇ ಕೊಡಚಾದ್ರಿ ಕಾಲೇಜು ಸಮೀಪ ಸಾವಿರಾರು ಜನರು ಸೇರಿದ್ದು ಪಾರ್ಥಿವ ಶರೀರ ಆಗಮನದ ಬಳಿಕ ಮಂಜುನಾಥ್ ರವರ ಪಾರ್ಥಿವ ಶರೀರ ವಿದ್ದಾ ತೆರೆದ ವಾಹನದ ಜೊತೆಗೆ ಸಾವಿರಾರು ಮಂದಿ ಮೆರವಣಿಗೆಯ ಮೂಲಕ ಅವರ ಹುಟ್ಟೂರ ಕಡೆಗೆ ಹೆಜ್ಜೆಯನ್ನು ಹಾಕಿದರು.

ದಾರಿ ಉದ್ದಕ್ಕೂ ಸಾರ್ವಜನಿಕರು ಶಾಲಾ ಮಕ್ಕಳು ಹೂವುಗಳನ್ನ ಹಾಕುವ ಮೂಲಕ ಅಗಲಿದ ಯೋಧನಿಗೆ ನಮನವನ್ನ ಸಲ್ಲಿಸಿದರು ಸರ್ಕಾರದ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹಾಲೇಶ್ ಹಾಗೆ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್ ಗೌರವವನ್ನು ಸಲ್ಲಿಸಿದರು.
ಅವರ ಮನೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದ್ದು ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಇಂದೆ ನೆರವೇರಿಸಲಾಗುವುದು...
MANJUNATH G S..
Discover more from Prasarana news
Subscribe to get the latest posts sent to your email.