

ಹೊಸನಗರ: ತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶರಾವತಿ ನದಿ ತಟದಲ್ಲಿರುವ ಹೊಳೆಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ಬುಧವಾರ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.
ಇಂದು ಬೆಳಗ್ಗೆಯಿಂದ ದೇವರ ಸನ್ನಿಧಿಯಲ್ಲಿ ದಾರ್ಮಿಕ ವಿಧಿವಿಧಾನಗಳು ನಡೆದವು.
ನೀರು ತುಂಬಿ ಹರಿಯುವ ಶರಾವತಿ
ಹೊಳೆ ಮಧ್ಯೆಯಿರುವ ಕಲ್ಲಿನಲ್ಲಿ ಮೂಡಿದ ಲಿಂಗವನ್ನು ಶುದ್ದಿಕರಿಸಿ ವಿವಿಧ ಹೂವುಗಳಿಂದ ಶೃಂಗರಿಸಲಾಯಿತು. ದೇವರಿಗೆ ರುದ್ರಾಭಿಷೇಕ ನಡೆಯಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ನೂರಾರು ಭಕ್ತರು ಹಣ್ಣುಕಾಯಿ ಒಪ್ಪಿಸಿ ಪೂಜೆ ಸಮರ್ಪಿಸಿದರು. ಪ್ರಸಾದ ವಿತರಣೆ ನಡೆಯಿತು.
ಕಲ್ಲಿನಲ್ಲಿ ಮೂಡಿದ ದೇವರು:
ಈ ಹೊಳೆಲಿಂಗೇಶ್ವರ ದೇವರ ಸನ್ನಿಧಿಯು ಶರಾವತಿ ನದಿ ಮಧ್ಯೆಯೇ ಇರುವ ದೇವರ ಸನ್ನಿಧಿ ಆಗಿದೆ. ಹೊಳೆ ಮಧ್ಯೆ ಜೋಡಿ ಕಲ್ಲುಗಳಿದ್ದು ಅದರಲ್ಲಿ ಶಿವಲಿಂಗ ಹಾಗೂ ಪರಿವಾರ ದೇವರ ಮೂರ್ತಿ ಕೆತ್ತನೆ ಮಾಡಲಾಗಿದೆ. ಹೊಳೆ ಲಿಂಗೇಶ್ವರ ಎಂದೆ ಕರೆಸಿಕೊಳ್ಳುವ ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿ ದಿನದಂದು ವಿಶೇಷ ಪೂಜೆ ಪುನಸ್ಕಾರ ನಡೆಯುತ್ತವೆ. ಸುತ್ತಲಿನ ಹಳ್ಳಿಗಳ ಜನರು ಈ ದೇವರಿಗೆ ನಡೆದುಕೊಳ್ಳುತ್ತಾರೆ.
ಮಳೆಗಾಲ ಮತ್ತದರ ಮುಳುಗಡೆ ನೀರು ತುಂಬಿರುವ ದಿನಗಳಲ್ಲಿ ಈ ಶಿವಲಿಂಗ ಸಂಪೂರ್ಣ ಮುಳುಗಿರುತ್ತದೆ. ಮುಳುಗಡೆ ಇಳಿದು ನೀರು ಹರಿವು ಕಡಿಮೆ ಆಗುತ್ತಿದ್ದಂತೆ ಲಿಂಗ ಕೆತ್ತನೆ ಮಾಡಲಾಗಿರುವ ಕಲ್ಲು ಕಾಣುತ್ತದೆ. ಆಗ ಹರಕೆ ಪೂಜೆಗಳು ನಡೆಯುತ್ತವೆ.
ಈ ಸಾರಿ ಸುತ್ತಲೂ ನೀರು ತುಂಬಿದ್ದು ಲಿಂಗ ಸ್ವಲ್ಪ ಪ್ರಮಾಣದಲ್ಲಿ ಗೋಚರವಾಗಿದ್ದು ವಿಶೇಷ ವಾಗಿತ್ತು.
ಚಿತ್ರ. ಹೊಸನಗರ ತಾಲ್ಲೂಕಿನ ಹೊಳೆ ಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು.
MAHASHIVRATRI..
Discover more from Prasarana news
Subscribe to get the latest posts sent to your email.