

ಹೊಸನಗರ: ರಾಮಚಂದ್ರಾಪುರಮಠ ಮಹಾನಂದಿ ಗೋಲೋಕದ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ ೮ ರಂದು ಕೃಷ್ಣಾರ್ಪಣಮ್ ವಾರ್ಷಿಕ ಕರ‍್ಯಕ್ರಮ ಏರ್ಪಡಿಸಲಾಗಿದೆ. ಇದರ ಅಂಗವಾದ ಭಾಗವತ ಸಪ್ತಾಹದ ಪಾರಾಯಣ ಮತ್ತು ಪ್ರವಚನ ಮಾ 1 ರಿಂದಲೇ ಆರಂಭಗೊAಡಿದ್ದು ಮಾ 7 ರಂದು ಸಮಾರೋಪಗೊಳ್ಳಲಿದೆ. ವೇ ಮೂರ್ತಿ ವಿದ್ವಾನ್ ಕೇಕಣಾಜೆ ಕೇಶವ ಭಟ್ ಇದನ್ನು ನಡೆಸಿಕೊಡುತ್ತಿದ್ದಾರೆ.
ಮಾ 7 ರ ಸಂಜೆ ಶ್ರೀರಾಘವೇಶ್ವರಭಾರತೀ ಶ್ರೀಗಳವರ ಆಗಮನ ಪೂರ್ಣಕುಂಭ ಸ್ವಾಗತದೊಂದಿಗೆ ನೆರವೇರಲಿದೆ. ಮತ್ತು ಮಾ 8 ರಂದು ಸಹಸ್ರಾಧಿಕ ಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ ಸಮರ್ಪಣೆ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, ಬಂಧಮುಕ್ತ ಗೋಶಾಲೆಯ ಲೋಕಾರ್ಪಣೆ, ವಿಷ್ಣು ಸಹಸ್ರನಾಮ ಲೇಖನ ಯಜ್ಞದ ದೀಕ್ಷೆ ಮತ್ತು ಪುಸ್ತಕದ ಸಮರ್ಪಣೆ, ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಧರ್ಮಸಭೆ, ಗೋಪಾಲಕರಿಗೆ ಆಶೀರ್ವದ ಕರ‍್ಯಕ್ರಮಗಳು ಸಂಪನ್ನಗೊಳ್ಳಲಿದೆ. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಸ್ಥಾಪಕ ಅಧ್ಯಕ್ಷ ವಿದ್ಯಾವಾಚಸ್ಪತಿ ಅರಳು ಮಲಿಗೆ ಪಾರ್ಥಸಾರಥಿಯವರು ಮುಖ್ಯ ಅತಿಥಿಗಳಾಗಿ ಈ ಕರ‍್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಹಾನಂದಿ ಗೋಲೋಕ ಸಮಿತಿ ತಿಳಿಸಿದೆ...
KRISHNARPANAM
Discover more from Prasarana news
Subscribe to get the latest posts sent to your email.