

ಹೊಸನಗರ : ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ಮತ್ತು ಆರ್ಥಿಕ ನೀತಿ ಬಡ ವರ್ಗದ ವಿರೋಧಿ ನೀತಿ ಆಗಿದ್ದು ಶ್ರೀಮಂತರನ್ನು ಮತ್ತಷ್ಟೃ ಶ್ರೀಮಂತರನ್ನಾಗಿಸುವ ಹುನ್ನಾರವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಬಿಜೆಪಿ ಪಕ್ಷ ಇಂದು ಜಾತಿ ವ್ಯವಸ್ಥೆ ಯನ್ನು ಪೋಷಿಸುತ್ತಲೆ ಬಂದಿದೆ.
ಜಾತಿ ಪದ್ದತಿ ಜೀವಂತ ಇಡುವಲ್ಲಿ ಆ ಪಕ್ಷ ಸದಾ ಸಕ್ರಿಯವಾಗಿದೆ.
ಬಿಜೆಪಿ ಪಕ್ಷ ದಲಿತರ ಮೇಲಿನ ಅಸಡ್ಡೆ ಮುಂದುವರೆಸಿಕೊಂಡೆ ಬಂದಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.
ಕನ್ನಡ ವಿರೋಧಿ ನಿಲುವು ತಳೆದಿರುವ ಬಿಜೆಪಿಗೆ ನಾವು ಯಾಕೆ ಮಾನ್ಯತೆ ನೀಡಬೇಕು ಎಂದು ಪ್ರಶ್ನಿಸಿದ ಕಿಮ್ಮನೆ ರತ್ನಾಕರ್,
ಜಾತ್ಯಾತೀತ ಭಾವನೆಯನ್ನು ಪ್ರಬಲವಾಗಿ ವಿರೋಧಿಸುವ ಬಿಜೆಪಿ ಪಕ್ಷ ಸಂಸ್ಕೃತ ಭಾಷೆಯೊಂದೆ ಅಧಿಕೃತ ಭಾಷೆ ಮಾಡುವುದು ಈ ಪಕ್ಷದ ಧ್ಯೇಯವಾಗಿದೆ. ದೇಶದಲ್ಲಿ
ಒಕ್ಕೂಟ ವ್ಯವಸ್ಥೆ ಇರುವುದನ್ನು ವಿರೋಧಿಸುವ ಬಿಜೆಪಿ ನಿಲುವು ಮುಂದಿನ ದಿನಗಳಲ್ಲಿ ಬಾರೀ ಪ್ರಮಾಣದ ಗಂಡಾಂತರಕ್ಕೆ ಕಾರಣವಾಗಲಿದೆ ಎಂದರು.
ಬಿಜೆಪಿ ಪಕ್ಷದ ಎಲ್ಲಾ ನಿಲುವುಗಳ ವಿರುದ್ಧ ಕಾಂಗ್ರೆಸ್ ಪಕ್ಷ ಇದೆ.
ಕಾರ್ಯಕರ್ತರು ಈ ಬಗ್ಗೆ ಜಾಗೃತರಾಗಿದ್ದು ಆ ನಿಲುವುಗಳನ್ನು ಪ್ರಬಲವಾಗಿ ಖಂಡಿಸಬೇಕು ಎಂದು ಕರೆ ನೀಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ, ರಾಮಚಂದ್ರಪ್ಪ ಬಂಡಿ, ಬಿ.ಜಿ. ನಾಗರಾಜ್, ಪ್ರಭಾಕರ ರಾವ್, ನೋರಾ ಮೆಟೆಲ್ಡಾ ಸೀಕ್ವೇರಾ, ಸಾಕಮ್ಮ ಹರತಾಳು ಪೂರ್ಣಿಮಾ ಮೂರ್ತಿ ಇದ್ದರು.
KIMMANE RATHNAKARA..
Discover more from Prasarana news
Subscribe to get the latest posts sent to your email.