
ಹೊಸನಗರ: ಸರ್ಕಾರ ಆದೇಶಿಸಿರುವಂತಹ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಬಾರದು ನಿಗದಿತ ಸಮಯಕ್ಕೆ ಅದನ್ನ ಪೂರ್ಣಗೊಳಿಸುವ ಕೆಲಸವನ್ನು ಎಲ್ಲ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.
ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲ ಕಾಮಗಾರಿಗಳ ವಿಳಂಬ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕೊರತೆಯ ದೂರುಗಳು ಬಂದ ಹಿನ್ನೆಲೆ ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾದಲ್ಲಿ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು..
ಜೆಜೆ ಎಂ ಕಾಮಗಾರಿ ಶೀಘ್ರವಾಗಿ ಮುಗಿಸಿ ಪ್ರತಿ ಮನೆಮನೆಗೂ ನೀರನ್ನು ನೀಡುವ ಯೋಜನೆಯನ್ನು ಪೂರ್ಣಗೊಳಿಸುವಂತೆ ಹಾಗೂ ಕೆಲ ಪ್ರದೇಶಗಳಲ್ಲಿ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯನ್ನು ಒಡ್ಡುತಿದು ಈ ಬಗ್ಗೆ ಗಮನಕ್ಕೆ ಬಂದಿದ್ದು ಸಭೆಯಲ್ಲಿ ಅಧಿಕಾರಿಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯನ್ನು ಮಾಡದಂತೆ ಹಾಗೂ ಅರಣ್ಯ ಇಲಾಖೆಯಿಂದ ಬೇಕಾದ ಸಹಕಾರವನ್ನು ನೀಡುವಂತೆ ಸೂಚಿಸಿದರು.

ಯಾವುದೇ ರೀತಿಯ ಹೊಸ ಭೂ ಒತ್ತುವರಿಗೆ ಅವಕಾಶವನ್ನ ನೀಡಬಾರದು ಮತ್ತು ಹಳೆಯ ಒತ್ತುವರಿಯನ್ನ ಯಥಾ ಸ್ಥಿತಿಯಲ್ಲೇ ಮುಂದುವರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ನೀಡುತ್ತಿರುವಂತಹ ಆಹಾರ ಕುರಿತು ಮಾಹಿತಿಯನ್ನು ಪಡೆದ ಆವರು ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಕಳಪೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ನಿತ್ಯ ವಸತಿ ನಿಲಯಗಳಲ್ಲಿ ನೀಡುವಂತಹ ಆಹಾರ ಕುರಿತು ತಾಲೂಕು ದಂಡಾಧಿಕಾರಿ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವರ ಗಮನಕ್ಕೆ ತರುವಂತೆ ಸೂಚಿಸಿದರು.
ಹೊಸನಗರ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನಿಯೋಜನೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳವನ್ನು ಶೀಘ್ರವಾಗಿ ವ್ಯವಸ್ಥೆ ಮಾಡುವಂತೆ ತಿಳಿಸಿದರು ಇದೇ ಸಂದರ್ಭದಲ್ಲಿ ಕೆಡಿಪಿಯ ನೂತನ ಸದಸ್ಯರಿಗೆ ಅಭಿನಂದಿಸಿದರು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತೀರ್ಥಹಳ್ಳಿ ಹೊಸನಗರ ಶಾಸಕರಾದ ಅರಗ ಜ್ಞಾನೇಂದ್ರ ತಾಲೂಕಿನಾದ್ಯಂತ ಗ್ಯಾಸ್ ಏಜೆನ್ಸಿಗಳು ನಿಗದಿತ ದರಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡುವ ಬದಲು ನಿಲಕ್ಷವನ್ನು ತೋರುತ್ತಿದ್ದೀರಿ ಕೂಡಲೇ ಬಗ್ಗೆ ಕ್ರಮವನ್ನ ಕೈಗೊಳ್ಳುವಂತೆ ಸೂಚಿಸಿದ್ದಲ್ಲದೆ ರಸ್ತೆಯ ಅಕ್ಕ ಪಕ್ಕದಲ್ಲಿರುವ ಬೀಳುವಂಥ ಸ್ಥಿತಿಯಲ್ಲಿರುವ ಅಕೇಶಿಯ ಮರಗಳನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಹಾಗೂ ನಗರ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧಿಗಳನ್ನ ಪೂರೈಸಲು ಹಾಗೂ ಇನ್ನೊಬ್ಬ ವೈದ್ಯರನ್ನ ನೇಮಕ ಮಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಆಡಳಿತ ಅಧಿಕಾರಿ ಜಯಲಕ್ಷ್ಮಿ, ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್ ಜೇ, ನರೇಂದ್ರ ಕುಮಾರ್ ಹಾಗೂ ಕೆಡಿಪಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
KDP:HOSANAGARA
Discover more from Prasarana news
Subscribe to get the latest posts sent to your email.