

ಹೊಸನಗರ: ಸಾಮೂಹಿಕ ಪೂಜೆಯಿಂದ ಸಮಾಜದಲ್ಲಿ ಏಕತೆ ತರಲು ಸಾಧ್ಯ. ಜಗತ್ತು ಭಾರತದ ಕಡೆ ನೋಡುತ್ತಿರುವ ಈ ಸಂದರ್ಭದಲ್ಲಿ ಸಮಾಜದಲ್ಲಿ ಸಂಘಟನೆ ಅತಿ ಮುಖ್ಯ. ಸಂಘಟನೆಯಿಂದ, ಏಕತೆಯಿಂದ ಸಾಮರಸ್ಯದಿಂದ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದೆಂದು ವಿದ್ವಾಂಸ ಹಾದಿಗಲ್ಲು ಲಕ್ಷ್ಮಿನಾರಾಯಣ ಹೇಳಿದರು.
ತಾಲ್ಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಬಳಗದ ಆಶ್ರಯದಲ್ಲಿ ನಡೆದ 33ನೇ ವರ್ಷದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯು ಸಾಮರಸ್ಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಆಧ್ಯಾತ್ಮಿಕ ಪರಂಪರೆ ಶ್ರೇಷ್ಠವಾಗಿದ್ದು ಜಗತ್ತು ಆ ಪರಂಪರೆ ಅನುಸರಿಸುತ್ತಿದೆ. ನಮ್ಮ ಧರ್ಮಶ್ರದ್ಧೆ , ಸಂಸ್ಕೃತಿ ಪರಂಪರೆಗಳನ್ನು ಅಳಿಸಲು ಎಷ್ಟೇ ರೀತಿಯ ಪ್ರಯತ್ನ ನಡೆದರೂ ಅದು ಅಸಾಧ್ಯವೆಂದು ತೋರಿಸಿದ ಕುಂಭಮೇಳದಲ್ಲಿ ಜನರು ಜಾತಿ, ಮತ, ಪ್ರಾಂತ, ಪಕ್ಷ ಭೇದಗಳನ್ನು ಮರೆತು ಏಕತೆಯನ್ನು ಪ್ರದರ್ಶಿಸಿದರು. ನಮ್ಮ ನಮ್ಮ ಗ್ರಾಮಗಳಲ್ಲೂ ಇದೇ ರೀತಿಯ ಏಕತೆಯ ಪ್ರದರ್ಶನ ಮಾಡಬೇಕೆಂದರು.
ರಾಷ್್ರ ಪ್ರಶಸ್ತಿ ಪುರಸ್ಕೃತ ಉದ್ಯಮಿ ರವಿಕುಮಾರ್ ಗುಳ್ಳೆಕೊಪ್ಪ, ಮತ್ತು ರ‍್ಯಾಂಕ್ ವಿಜೇತ ಡಾ. ಸುಮನ್ ಕಾರಗಡಿ ಅವರನ್ನು ಸನ್ಮಾನಿಸಲಾಯಿತು. ವಿಶ್ವಾವಸು ಸಂವತ್ಸರದ ಪಾಕೆಟ್ ದಿನಚರಿಯನ್ನು ಬಿಡುಗಡೆ ಮಾಡಲಾಯಿತು.
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ. ಎಸ್. ನಳಿನಚಂದ್ರ, ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ನಿವೃತ್ತ ಪ್ರಾಚಾರ್ಯ, ಸಾಹಿತಿ ವಂದಗದ್ದೆ ಚಂದ್ರಮೌಳಿ, ಸಂಗೀತ ವಿದುಷಿ ಶೀಲಾರಾಮನ್ ಪಾಲ್ಗೊಂಡಿದ್ದರು.
ಹನಿಯ ರವಿ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ನಿರೂಪಿಸಿದರು. ರಮೇಶ ಹಲಸಿನಕಟ್ಟೆ ವಂದಿಸಿದರು.
2 ದಿನಗಳ ಕಾರ್ಯಕ್ರಮದಲ್ಲಿ ಗಣಪತಿ ಉಪನಿಷದ್ ಹವನ, ಸೂರ್ಯನಮಸ್ಕಾರ, ಶತರುದ್ರಾಭಿಷೇಕ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಹಸ್ರಾಧಿಕ ಸತ್ಯನಾರಾಯಣ ಪೂಜೆ ನಡೆಯಿತು.
KARANAGIRI..
Discover more from Prasarana news
Subscribe to get the latest posts sent to your email.