

ಹೊಸನಗರ: ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಾಳೆಯಿಂದ 9 ದಿನಗಳ ಕಾಲ ವಿಜೃಂಭಣೆ ಇಂದ ನೆರವೇರಲಿದೆ ಎಂದು ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ ಫೆ. 4ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವಿಯ ತವರು ಮನೆಯೆಂದೇ ಕರೆಯಲ್ಪಡುವ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಸಂಜೆ 9 ಗಂಟೆಯವರೆಗೆ ಅಲ್ಲಿ ಪೂಜಾ ಕಾರ್ಯಕ್ರಮ ನೆರವೇರಲಿದೆ. ಬಳಿಕ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆಯೆಂದೇ ಖ್ಯಾತಿ ಪಡೆದಿರುವ ಮಾರಿಗುಡ್ಡದಲ್ಲಿ 8 ದಿನಗಳ ಕಾಲ ಪ್ರತಿಷ್ಟಾಪಿಸಿ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ವಿಜಯ್ ಅಮ್ಯೂಸ್‌ಮೆಂಟ್‌ನವರಿಂದ ರೋಮಾಂಚನಕಾರಿ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು,ಹೀಗೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದ್ದು ಪ್ರತಿ ದಿನ ರಾತ್ರಿ ಪ್ರಖ್ಯಾತ ದೂರದರ್ಶನ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮವಿದ್ದು ಫೆ. 6ರ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ, 7ರ ಶುಕ್ರವಾರ ಭದ್ರಾವತಿ ತಂಡದಿಂದ ಆರ್ಕೆಸ್ಟ್ರಾ, 8ರ ಶನಿವಾರ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ, 9ರ ಭಾನುವಾರ ಮೂರು ಮತ್ತು ಖ್ಯಾತಿಯ ಕುಂದಾಪುರ ರೂಪಕಲಾ ತಂಡದಿಂದ ಇನ್ಸ್‌ಪೆಕ್ಟರ್ ಅಣ್ಣಪ್ಪ ನಾಟಕ, 10ರ ಸೋಮವಾರ ಡೆಸ್ಟನಿ ಡ್ಯಾನ್ಸ್ ಕೊಪ್ಪದವರಿಂದ ನೃತ್ಯ ಕಾರ್ಯಕ್ರಮ, 11ರ ಮಂಗಳವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿದ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಲಿದು. ಸಾರ್ವಜನಿಕರು ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿಕೊಡುವಂತೆ ಸಮಿತಿ ಕೋರಿದ್ದಾರೆ...
JATRA MAHOTSAVA.
Discover more from Prasarana news
Subscribe to get the latest posts sent to your email.