

ಹೊಸನಗರ: ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ಹಾಗೂ ನ್ಯಾಕ್ ಮತ್ತು ಐಕ್ಯು ಎಸಿ ಸಹಯೋಗದೊಂದಿಗೆ ಮಂಗಳವಾರ ನಡೆದಂತಹ ಕುವೆಂಪು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗೂ ಮಹಿಳಾ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಶಿವಮೊಗ್ಗ ಡಿ ವಿ ಎಸ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿದರು.
ಡಿ ವಿ ಎಸ್ ಕಾಲೇಜಿನ ಕೆ. ಕಿರಣ್ ಪುರುಷ ವಿಭಾಗದಲ್ಲಿ ಹೆಚ್.ವಿ ದೀಕ್ಷಾ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದರು ಹಾಗೆಯೇ ಪುರುಷ ವಿಭಾಗದಲ್ಲಿ ಎನ್ ಆರ್ ಪುರದ ಶರಪಂಜಿತ್ 2ನೇ, ಶಿವಮೊಗ್ಗ ಡಿ ವಿ ಎಸ್ ಕಾಲೇಜಿನ ಎಂ.ಎಸ್ ಆಶ್ರಿತ 3ನೇ, ಹೊಸನಗರ ಕೊಡಚಾದ್ರಿ ಕಾಲೇಜಿನ ಶಶಾಂಕ್ 4ನೇ, ಶಂಕರಘಟ್ಟದ ನಿತಿನ್ 5ನೇ ಹಾಗೂ ಶಿವಮೊಗ್ಗ ಡಿ ವಿ ಎಸ್ ಕಾಲೇಜಿನ ವೈ.ಎಸ್ ಸುದರ್ಶನ್ 6 ನೇ ಸ್ಥಾನವನ್ನು ಗಳಿಸಿದರು.

ಹಾಗೆಯೇ ಮಹಿಳಾ ವಿಭಾಗದಲ್ಲಿ ಶಂಕರಘಟ್ಟದ ಮಾನಸ 2ನೇ, ತೀರ್ಥಹಳ್ಳಿಯ ಕೆ.ಎಸ್. ಸ್ವಾಗತ್ 3ನೇ, ಹೊಸನಗರ ಕೊಡಚಾದ್ರಿ ಕಾಲೇಜಿನ ಎಂ.ಪಿ. ಪುಷ್ಪ 4ನೇ, ಸಾಗರದ ಏನ್. ಸಂಜನಾ 5ನೇ, ತೀರ್ಥಹಳ್ಳಿಯ ಡಿ.ಪಿ. ಪ್ರೀತಿ 6ನೆ ಸ್ಥಾನವನ್ನು ಗಳಿಸಿದರು.
ವಿಜೇತ ಕ್ರೀಡಾಪಟುಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಪಾರಿತೋಷಕವನ್ನು ವಿತರಿಸಿ ಶುಭ ಹಾರೈಸಿದರು ಅಲ್ಲದೆ ಕಾಲೇಜಿನ ಅಭಿವೃದ್ಧಿ ಕುರಿತಂತೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹಾಗೆಯೇ ಕಾಲೇಜು ಅಭಿವೃದ್ಧಿಗಾಗಿ ಎರಡು ಕೋಟಿ ಅನುದಾನ ಬಂದಿದ್ದು ವ್ಯವಸ್ಥಿತ ಕ್ಯಾಂಟೀನ್ ಹಾಗೂ ಶೌಚಾಲಯ ನಿರ್ಮಾಣ ಕುರಿತು ಯೋಚಿಸಿದ್ದು ಮುಂದಿನ ಸಭೆಯ ಬಳಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಉಮೇಶ್. ಕೆ, ಎಂ ಗುಡ್ಡೆ ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಜಿ.ಎನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ, ರವಿ ಸಿ ಎಚ್, ಲೋಕೇಶಪ್ಪ ಹೆಚ್, ಸುಬ್ರಮಣ್ಯ ಬಿಜಿ, ಉಪಸ್ಥಿತರಿದ್ದರು.
Discover more from Prasarana news
Subscribe to get the latest posts sent to your email.