HOSANAGARA NEWS:     79ನೇ ಸ್ವಾತಂತ್ರ್ಯ ದಿನಾಚರಣೆ: ಹೊಸನಗರ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ರಶ್ಮಿ. ಜೆ…

ಹೊಸನಗರ: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಹೊಸನಗರ ತಾಲೂಕು ತಹಶೀಲ್ದಾರ್ ರಶ್ಮಿ. ಜೆ ನೆಹರು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಬಳಿಕ ಪೊಲೀಸ್ ಇಲಾಖೆ, ಗೃಹರಕ್ಷಕ ಇಲಾಖೆ ಹಾಗೂ ವಿವಿಧ ಶಾಲಾ ಮಕ್ಕಳಿಂದ ಧ್ವಜ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು
ಸ್ವಾತಂತ್ರ್ಯ ಎಂದರೆ ಕೇವಲ ರಾಷ್ಟ್ರಗೀತೆ ಹಾಡುವುದು, ರಾಷ್ಟ್ರಧ್ವಜವನ್ನು ಹಾರಿಸುವುದು ಅಷ್ಟೇ ಅಲ್ಲ  ನಮ್ಮಲ್ಲಿರುವ ಎಲ್ಲಾ ಭಾರತೀಯರಿಗೆ ಸಮಾನತೆಯನ್ನು ನೀಡುವಂತದ್ದು ಹಾಗೂ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ಸ್ವತಂತ್ರವಾಗುತ್ತದೆ.


ಈ ಸ್ವಾತಂತ್ರ್ಯ ದಿನದ ಮಹತ್ವ ತಿಳಿಯಬೇಕಾದರೆ ಸ್ವತಂತ್ರ ಪೂರ್ವದಲ್ಲಿ ಭಾರತೀಯರು ಹೇಗಿದ್ದರೂ ಮತ್ತು ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ತಿಳಿಯಬೇಕು ಸ್ವತಂತ್ರ ಪೂರ್ವದಲ್ಲಿ ನೋಡುವುದಾದರೆ ಆಗ ಮೂಲಸೌಕರ್ಯಗಳ ಕೊರತೆ ಇತ್ತು, ದೇಶ ಬ್ರಿಟಿಷರ ಆಳ್ವಿಕೆಯಲ್ಲಿತ್ತು ಅಲ್ಲದೆ ಆ ಸಮಯದಲ್ಲಿ ಭಾರತೀಯರ ಯಾವ ಸಮಸ್ಯೆಗಳಿಗೂ ಅವರಿಂದ ಸ್ಪಂದನೆ ದೊರೆಯುತ್ತಿರಲಿಲ್ಲ ಅವರ ಕೈಗೊಂಬೆಗಳಂತೆ ಬದುಕನ್ನ ನಡೆಸುತ್ತಿದ್ದರು ಇಂತಹ ಸಂದರ್ಭದಲ್ಲಿ ಮಹಾನ್ ನಾಯಕರು ಗಳದ ಮಹಾತ್ಮ ಗಾಂಧಿ, ಭಗತ್ ಸಿಂಗ್, ವಲ್ಲಭ ಬಾಯ್ ಪಟೇಲ್, ವೀರ ಸಾವರ್ಕರ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸೇರಿದಂತೆ ಬಹಳಷ್ಟು ಮಹನೀಯರು ಸ್ವತಂತ್ರಕ್ಕಾಗಿ ತಮ್ಮದೇ ಆದಂತಹ ತ್ಯಾಗವನ್ನ ಹೋರಾಟವನ್ನು ಮಾಡಿದ ಫಲವಾಗಿ ಇಂದು ನಾವು ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗಪ್ಪ ಉಪಾಧ್ಯಕ್ಷ ಚಂದ್ರಕಲಾ ನಾಗರಾಜ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ಬಿ ಇ ಓ ಚೇತನ ಆರ್ ಪಿ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣವೇಣಿ, ಸಿಂಥಿಯಾ ಸೆರಾವ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹರೀಶ್ ಎಂ ಏನ್ ಮುಂತಾದ ಅಧಿಕಾರಿಗಳೂ ಉಪಸ್ಥಿತರಿದ್ದರು..

HOSANAGARA NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading