Hosanagara:prasarananews. -“ಸರ್ಕಾರಿ ಗೋಶಾಲೆ ತುಂಬೆಲ್ಲಾ ಬಿಯರ್ ಬಾಟಲಿಗಳು… ಐತಿಹಾಸಿಕ ಸರ್ಕಾರಿ ಗೋಶಾಲೆ ಈಗಾ ಕುಡುಕರ ಅಡ್ಡೆ….”

               "ಸರ್ಕಾರಿ ಗೋಶಾಲೆ ಗೊರಗೋಡು"

ಹೊಸನಗರ: ಹಿಂದಿನ ಬಿಜೆಪಿ ಸರ್ಕಾರದ ಮಹತ್ವದ ಯೋಜನೆಯಾದ "ಜಿಲ್ಲೆಗೊಂದು ಗೋಶಾಲೆ " ಯೋಜನೆ ಅಡಿಯಲ್ಲಿ ಹೊಸನಗರ ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರಗೋಡಿನಲ್ಲಿ ಒಂದು ಕೋಟಿ ರೂ ಅನುದಾನದ 10 ಎಕರೆ ಜಾಗದಲ್ಲಿ ನಿರ್ಮಾಣವಾದತಹ ಸರ್ಕಾರಿ ಗೋಶಾಲೆ ಇದೀಗ ಕುಡುಕರ ಅಡ್ಡ ಯಾಗಿ ಮಾರ್ಪಾಡಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ, ಶಿವಮೊಗ್ಗ ಹಾಗೂ ಗ್ರಾಮ ಪಂಚಾಯ್ತಿ ಮೇಲಿನಬೆಸಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾ.ಪಂನ ಗೊರಗೋಡು ಗ್ರಾಮದಲ್ಲಿ ಸರ್ಕಾರದ ವತಿಯಿಂದ ‘ಜಿಲ್ಲೆಗೊಂದು ಗೋಶಾಲೆ’ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ಆಗಿನ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಹಾಗೂ ಸಾಗರ ಹೊಸನಗರ ಶಾಸಕರಾದ ಹರತಾಳು ಹಾಲಪ್ಪನವರು ಗೋಶಾಲೆ ಸ್ಥಾಪನೆಗೆ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು.


200 ಅಧಿಕ ಗೋವುಗಳನ್ನು ಸಾಕಬಲ್ಲ ಹಾಗೂ ಬೀಡಾಡಿ ಗೊವುಗಳು ರೈತರು ಸಾಕಲು ಕಷ್ಟವಾಗಿರುವಂತಹ ಜಾನುವಾರುಗಳನ್ನು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಜಾನುವಾರುಗಳನ್ನು ಪೋಷಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಯಿತು.
ಗೋ ಶಾಲೆ ಆರಂಭಗೊಂಡು ಸರಿಸುಮಾರು ಒಂದುಮುಕ್ಕಾಲು ವರ್ಷಗಳೇ ಕಳೆದು ಹೋಗಿದೆ ಆದರೆ ಯಾವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಯಿತು ಆ ಉದ್ದೇಶ ಈವರೆಗೂ ಈಡೇರಿಲ್ಲ ಆದರೆ ಈ ಸರ್ಕಾರಿ ಗೋಶಾಲೆ ಈಗ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿದೆ ಅಲ್ಲದೆ ಕುಡುಕರ ಅಡ್ಡೆಯಾಗಿದೆ. ಗೋಶಾಲೆಯ ಸುತ್ತಮುತ್ತಲು ನೂರಾರು ಬಿಯರ್ ಬಾಟಲ್ ಗಳು, ಬಿಡಿ ಸಿಗರೇಟು ತುಂಡುಗಳು, ಇಸ್ಪೀಟ್ ಎಲೆಗಳು ಹೀಗೆ ಈ ಸರ್ಕಾರಿ ಗೋಶಾಲೆಯಲ್ಲಿ  ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎನ್ನುವುದಕ್ಕಿಂತ ಇಷ್ಟೆಲ್ಲ ಅಕ್ರಮ ಚಟುವಟಿಕೆಗಳು ನಡೆದಿದೆ ಹಾಗೂ ನಿತ್ಯ ನಡೆಯುತ್ತಿದೆ ಎಂಬುದಕ್ಕೆ ಬಹಳಷ್ಟು ಸಾಕ್ಷಿಗಳಿವೆ.

" ಬಿಯರ್ ಬಾಟಲ್ ಗಳು, ಬಿಡಿ ಸಿಗರೇಟು ತುಂಡುಗಳು,ಇಸ್ಪೀಟ್ ಎಲೆಗಳು"


ಸ್ಥಳೀಯರು ಹೇಳುವ ಪ್ರಕಾರ ನಿತ್ಯ ರಾತ್ರಿ ವೇಳೆ ಹಲವಾರು ವಾಹನಗಳು ಅಲ್ಲಿ ಬಂದು ಹೋಗುತ್ತವೆ ನಿರ್ಜನ ಪ್ರದೇಶವಾದುದರಿಂದ ಅಲ್ಲಿ ಸ್ಥಳೀಯರು ಯಾರು ಹೋಗದೆ ಇರುವ ಕಾರಣ ಅಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಯಾವುದೇ ಭಯವಿಲ್ಲದಂತಾಗಿದೆ.
ಒಳ್ಳೆಯ ಉದ್ದೇಶಕ್ಕಾಗಿ ಆರಂಭಗೊಂಡಂತಹ ಈ ಯೋಜನೆ ಮುಂದುವರಿಯಬೇಕು ಅ ಗೋ ಶಾಲೆಯಲ್ಲಿ ಗೋವುಗಳ ಸಂರಕ್ಷಣೆ ಆಗಬೇಕು ಅಷ್ಟೇ ಅಲ್ಲದೆ ಅಲ್ಲಿ ನಡೆಯುತ್ತಿರುವಂತೆ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳಬೇಕು..

 

"ಗೋಶಾಲೆಯನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ನೀಡುವ ಕುರಿತಾಗಿ ಸರ್ಕಾರಕ್ಕೆ ಇಲಾಖೆ ಅನುಮೋದನೆಯನ್ನು ಕಳಿಸಿದೆ ಹಾಗೆ ಅದರ ನಿರ್ವಹಣೆಗೆ ಸಿಬ್ಬಂದಿಗಳು ನೇಮಕವಾಗದ ಹಿನ್ನೆಲೆ ಗೋಶಾಲೆಯಲ್ಲಿ ಗೋವುಗಳನ್ನು ತಂದು ಪೋಷಿಸು ಕೆಲಸ ಆಗಿಲ್ಲ.
ಅಲ್ಲಿ ಸಿಬ್ಬಂದಿಗಳ ನೇಮಕವಾಗದ ಕಾರಣ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಲು ಕಷ್ಟವಾಗಲಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ."

ಪಣಿರಾಜ್.
ಪಶು ವೈದ್ಯ ಅಧಿಕಾರಿ ಹಾಗೂ ಮೇಲ್ವಿಚಾರಕರು ಸರ್ಕಾರಿ ಗೋಶಾಲೆ ಗೊರಗೋಡು.

 

"ಬಿಜೆಪಿ ಸರ್ಕಾರದ ಗೋವುಗಳ ರಕ್ಷಣೆಗಾಗಿ ಜಾರಿಗೆ ತಂದಂತಹ ಈ ಯೋಜನೆ ಈ ಭಾಗಕ್ಕೆ ತರಲು ನಾನು ಶಾಸಕರುಗಳೊಂದಿಗೆಸೇರಿ ಬಹಳಷ್ಟು ಶ್ರಮಿಸಿದ್ದೇನೆ ಯೋಜನೆಯ ಮತ್ತೆ ಪ್ರಾರಂಭಿಸಬೇಕು ಯಾವುದೇ ಸರ್ಕಾರವಿರಲಿ ಗೋವುಗಳ ರಕ್ಷಣೆಗೆ ಮುಂದಾಗಬೇಕು ಹಾಗೂ ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು"

ಸುರೇಶ್ ಸ್ವಾಮಿರಾವ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು.

 

 

ವರದಿ: ಮನು ಸುರೇಶ್✍🏼


Discover more from Prasarana news

Subscribe to get the latest posts sent to your email.

  • Related Posts

    TERRORIST ATTACK: ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ..
    ಹಿಂದೂ ಸಂಘಟನೆಗಳಿಂದ ಪ್ರತಿಭಟನೆ..

    ಹೊಸನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಮ್ನ್ ನ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಅಡಿಯನ್ನ ಹೊಸನಗರ ತಾಲೂಕಿನ ವಿವಿಧ ಹಿಂದುಪರ ಸಂಘಟನೆ ಗಳು ತೀವ್ರವಾಗಿ ಖಂಡಿಸಿದ್ದಲ್ಲದೆ ಭಯೋತ್ಪಾದಕ ಸಂಘಟನೆಗಳನ್ನು ಮೂಲದಿಂದ ನಿರ್ನಾಮ ಮಾಡುವಂತೆ…

    Read more

    SECOND P U C:              ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ ಜಿಲ್ಲೆಗೆ ಪ್ರಥಮ..
    ತಾಲೂಕು ಒಕ್ಕಲಿಗ ಸಂಘದಿಂದ ಸನ್ಮಾನ..

    ಹೊಸನಗರ: ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ನಗರ ಹೋಬಳಿಯ ಪ್ರಜ್ವಲ್ ಹಿರಿಮನೆ ಅವರನ್ನು ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಉಳೆಗದ್ದೆ ದೇವೇಂದ್ರಪ್ಪ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading