

ಹೊಸನಗರ: ತಾಲ್ಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿನಗೊಳ್ಳಿಯಲ್ಲಿ ಶ್ರೀ ಮಾರಿಕಾಂಬಾ ದೇವಿಯ 2ನೇ ವರ್ಷದ ವರ್ಧಂತ್ಯೋತ್ಸವ ಇಂದು ಅದ್ದೂರಿಯಾಗಿ ಧಾರ್ಮಿಕ ಕಾರ್ಯಕ್ರಮ ಮೂಲಕ ಜರುಗಿತು. ಹೋಮ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲಿ ಭಾಗಿಯಾಗಿದ್ದ ಗ್ರಾಮದ ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣ ಕಾರ್ಯಕ್ರಮವು ಸಹ ನಡೆಯಿತು. ಇದೇ ದಿನ ಸಂಜೆ ಸದಾನಂದ ಶಿವಯೋಗ ಆಶ್ರಯ ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಯಸ್ಸಲ್ಲಿದ್ದಾರೆ ಅಲ್ಲದೆ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡಿದ್ದಾರೆ. ರಾತ್ರಿ ಭದ್ರಾವತಿ ಸ್ನೇಹ ಮೆಲೋಡಿಸ್ ಅವರಿಂದ ಆಕೇಸ್ಟ್ರ್ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀ ಮಾರಿಕಾಂಬ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕರಿನಗೊಳ್ಳಿ ವಿನಂತಿಸಿದೆ....
HOSANAGARA..
Discover more from Prasarana news
Subscribe to get the latest posts sent to your email.