HOSA NAGARA: ತ್ಯಾಗ ಮತ್ತು ಪರೋಪಕಾರವೇ ನಮಗೆ ಶತ್ರು…
ಕ್ಷೇತ್ರ ಅಸ್ತಿತ್ವಕ್ಕೆ ಸಂಘಟನಾತ್ಮಕ ಹೋರಾಟ ಅನಿವಾರ್ಯ ಪತ್ರಕರ್ತ ರವಿ ಬಿದನೂರು…


ಹೊಸನಗರ:ತಾಲೂಕು ವಿಧಾನ ಸಭಾ ಕ್ಷೇತ್ರದ ಜೊತೆಗೆ ತನ್ನ ಅಸ್ತಿತ್ವವನ್ನು ಸಹ ಕಳೆದುಕೊಂಡಿದೆ ಇದಕ್ಕೆ ನಮ್ಮ ರಾಜಕಾರಣಿಗಳ ಹೋರಾಟಗಾರರ ಕ್ಷೇತ್ರದ ಜನರ ತ್ಯಾಗ ಮತ್ತು ಪರೋಪಕಾರ ಭಾವನೆಗೆ ಮುಖ್ಯವಾದ ಕಾರಣವಾಗಿದೆ ಎಂದು ಪತ್ರಕರ್ತ ರವಿ ಬಿದನೂರು ತಿಳಿಸಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಸ್ತಿತ್ವ ಕಳೆದುಕೊಂಡ ತಾಲೂಕು ವಿಷಯ ಕುರಿತಾಗಿ ವಿಶ್ಲೇಷಿಸಿದ ಅವರು
ಅವೈಜ್ಞಾನಿಕ ಕ್ಷೇತ್ರ ವಿಂಗಡನೆಯಿಂದಾಗಿ ನಾವು ನಮ್ಮ ಕ್ಷೇತ್ರವನ್ನು ಕಳೆದುಕೊಳ್ಳುವಂತಾಯಿತು. ಬಹುಶಃ ಇತಿಹಾಸ ಪುಟಗಳನ್ನ ಕೆದಕಿದಾಗ ನಮ್ಮ ತಾಲೂಕು ಪರರಿಗೆ ಎಲ್ಲವನ್ನು ನೀಡಿ ತನಗೆ ಏನು ಇಲ್ಲದಂತಹ ಪರಿಸ್ಥಿತಿಯನ್ನು ತಂದುಕೊಂಡಿದೆ ಜಗತ್ತಿನ ಇತಿಹಾಸದಲ್ಲಿ ಒಂದು ಪ್ರಮುಖ ಜಲಾಶಯದ ಬೃಹತ್ ಹಿನ್ನೆರು ಹಾಗೂ ಐದು ಜಲಾಶಯಗಳನ್ನು ಹೊಂದಿರುವ ಏಕೈಕ ತಾಲೂಕು ನಮ್ಮದಾಗಿದ್ದು ಅಭಿವೃದ್ಧಿ ಇಲ್ಲದಂತಹ ಶೀರ್ಷಿಕೆಗಳನ್ನ ಅತಿ ಹೆಚ್ಚು ನೀಡಬಲ್ಲ ತಾಲೂಕು ಸಹ ಇದಾಗಿದೆ ಎಂದರು.
ತ್ಯಾಗಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮೂರು ಬಾರಿ ಶಾಸಕರಾದ ಬಿ ಸ್ವಾಮಿರಾವ್ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು ಅವರ ಬಳಿ ಇದನ್ನು ಹೇಳಲು ತೆರಳಿದ  ಸಂದರ್ಭದಲ್ಲಿ ಬಂಗಾರಪ್ಪನವರು  ನಾನು ಮುಖ್ಯಮಂತ್ರಿ ಆಗಿದ್ದೇನೆ ಅಂದಮೇಲೆ ನೀನು ಮುಖ್ಯಮಂತ್ರಿ ಇದ್ದಂತೆ ನಿನಗೆ ಸಚಿವ ಸ್ಥಾನ ಏಕೆ ಎಂದರಂತೆ ಇದರಿಂದ ಸಚಿವ ಸ್ಥಾನದ ಬೇಡಿಕೆಯಿಂದ ಸ್ವಾಮಿ ರಾವ್ ಹಿಂದೆ ಸರಿದರು ಇದು ಅವರ ತ್ಯಾಗ ಗುಣವಾದರೆ ಇದರಿಂದ ಸಮಸ್ಯೆಯನ್ನು ಅನುಭವಿಸಿದ್ದು ಹೊಸನಗರ ತಾಲೂಕು ಒಂದು ವೇಳೆ ಸ್ವಾಮಿರಾಯರು ಸಚಿವರಾಗಿದ್ದರೆ ಅಂದು ರಾಜ್ಯಮಟ್ಟದ ನಾಯಕರಾಗುತ್ತಿದ್ದರು ಕ್ಷೇತ್ರವನ್ನ ವಿಂಗಡಿಸುವ ಸಂದರ್ಭದಲ್ಲಿ ಇವರ ಮಾತನ್ನು ಅಲ್ಲಗಳಿಯುವಂತಹ  ಪ್ರಮವೇ ಬರುತ್ತಿರಲಿಲ್ಲ ಇವರ ಮಾತಿಗೆ ವಿರೋಧವಾಗಿ ಕ್ಷೇತ್ರವನ್ನು ತೆಗೆಯುತ್ತಿರಲಿಲ್ಲ.
ಕಾಗೋಡು ತಿಮ್ಮಪ್ಪನವರ ಗಟ್ಟಿತನದಿಂದ ಸಾಗರ ಕ್ಷೇತ್ರ ಹಾಗೂ ಬಂಗಾರಪ್ಪನವರು ಸಂಸದರಾಗಿದ್ದಾಗ ಸ್ವರಬ ಕ್ಷೇತ್ರವನ್ನು ಉಳಿಸಿಕೊಂಡು ಬಂದರು ನಾವು ಮಾತ್ರ ನಮ್ಮ ನಾಯಕರ ತ್ಯಾಗ ಹಾಗೂ ಪರೋಪಕಾರ ಗುಣದಿಂದ ಕ್ಷೇತ್ರವನ್ನು ಕಳೆದುಕೊಂಡೆವು.
ಇನ್ನೊಂದು ದುರಂತವೇನೆಂದರೆ ನಮ್ಮ ತಾಲೂಕಿನಲ್ಲಿ ಅಥವಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಕೈಗಾರಿಕೆ ಯನ್ನಾ ಸ್ಥಾಪಿಸಿ ಅಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಲು ಕಾಯ್ದಿರಿಸಿದ ಒಂದು ಎಕರೆ ಜಾಗೂ ಸಹ ನಮ್ಮ ಬಳಿ ಇಲ್ಲ ಇದಕ್ಕೆ ಪ್ರಮುಖ ಕಾರಣ ದೂರ ದೃಷ್ಟಿಯ ನಾಯಕರು ನಮ್ಮ ನಡುವೆ ಇಲ್ಲದೆ ಇರುವುದು ತನ್ನ ವ್ಯಾಪ್ತಿಯಲ್ಲಿ ತನ್ನ ಇತಿಮಿತಿಯಲ್ಲಿ ಇರುವಂತಹ ಸಮಸ್ಯೆಗಳನ್ನು ತಮ್ಮ ನಾಯಕರು ಬಳಿ ಹೋಗಿ ಹೇಳಿ ಅವುಗಳನ್ನು ಸರಿಪಡಿಸುವ ಕೆಲಸವನ್ನು ಯಾರು ಮಾಡುತ್ತಾರೋ ಅವರು ನಿಜವಾದ ಜನನಾಯಕರು ಇತ್ತೀಚಿನ ದಿನಗಳಲ್ಲಿ ಮುಖಂಡರುಗಳು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಶಾಸಕರು ಸಂಸದರ ಬಳಿ ಮಾತನಾಡಲು ಸಹ ಹಿಂಜರಿಯುತ್ತಾರೆ ನಮ್ಮ ವ್ಯಾಪ್ತಿಯ ಸಮಸ್ಯೆಗಳನ್ನ ಅಗತ್ಯವಿರುವ ಕೆಲಸಗಳನ್ನು ಅವರ ಬಳಿ ನೇರವಾಗಿ ಹೋಗಿ ಮಾತನಾಡುವ ಕೆಲಸ ಯಾವಾಗ ನಡೆಯುತ್ತದೆಯೋ ಆಗ ಮಾತ್ರ ಕಳೆದುಕೊಂಡಿದ್ದನ್ನ ತಾಲೂಕು ಪುನಃ ಪಡೆದುಕೊಳ್ಳುತ್ತದೆ.
ನಮ್ಮ ಹೊಸನಗರ ಕ್ಷೇತ್ರದ ಅಸ್ಮಿತೆಯನ್ನ ಕಾಪಾಡುವುದರಲ್ಲಿ ರಾಜಕೀಯ ನಾಯಕರಾಗಲಿ ಹೋರಾಟಗಾರರಾಗಲಿ ಸಾರ್ವಜನಿಕರಾಗಲಿ ಯಾವ ಕೊಡುಗೆಯನ್ನು ಕೊಟ್ಟಿದ್ದೇವೆ ಎಂದು ಮೊದಲು ನಾವು ಅರಿಯಬೇಕು
ತಾಲೂಕಿನ ಅಸ್ತಿತ್ವದ ವಿಚಾರದಲ್ಲಿ ಇದೇ ರೀತಿಯ ಮನಸ್ಥಿತಿ ನಮ್ಮಲ್ಲಿದ್ದರೆ, ಇದೇ ರೀತಿಯ ಹೋರಾಟ ಮನೋಭಾವ ಮುಂದುವರೆದರೆ, ಮುಖಂಡರುಗಳು ಕೇವಲ ಜನಪ್ರತಿನಿಧಿಗಳ ಹಿಂಬಾಲಕರಾಗಿಯೇ ಉಳಿದರೆ ಕ್ಷೇತ್ರವನ್ನು ಅಷ್ಟೇ ಅಲ್ಲದೆ ತಾಲೂಕನ್ನು ಸಹ ಕಳೆದುಕೊಳ್ಳುವ ಪರಿಸ್ಥಿತಿ ಮುಂದೆ ಬಂದದೋದಗಲಿದೆ ಕ್ಷೇತ್ರದ ಮರುಸ್ಥಾಪನೆ ವಿಚಾರವಾಗಿ ಈವರೆಗೂ ಬೆರಳೆಣಿಕೆಯ ಹೋರಾಟಗಳು ಸಭೆಗಳು ನಡೆದಿದೆ ಅಷ್ಟೇ ಆದ್ದರಿಂದ ಕ್ಷೇತ್ರದ ಅಸ್ತಿತ್ವಕ್ಕೆ ಸಂಘಟನಾತ್ಮಕವಾಗಿ ಹೋರಾಟವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು ಎಂದು ತಿಳಿಸಿದರು...

HOSA NAGARA ...


Discover more from Prasarana news

Subscribe to get the latest posts sent to your email.

  • Related Posts

    NETWORK PROBLEM:ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆಗೆ ಸಜ್ಜಾದ ವಾರಂಬಳ್ಳಿ ಗ್ರಾಮಸ್ಥರು…

    ಹೊಸನಗರ: ಕಳೆದ ಎಂಟು ವರ್ಷಗಳಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿಪಡಿಸುವಂತೆ ವಾರಂಬಳ್ಳಿ ಗ್ರಾಮಸ್ಥರು ಪ್ರಧಾನ ಮಂತ್ರಿ ಗಳಿಗೆ ಪತ್ರ ಬರೆಯುವುದರಿಂದ ಹಿಡಿದು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿದ್ದಾರೆ ಆದರೆ ಈವರೆಗೂ ಅವರಿಗೆ ಕೇವಲ ಆಶ್ವಾಸನೆ ಅಷ್ಟೇ ದೊರೆತದ್ದು.ಹೊಸನಗರ ತಾಲೂಕಿನ ವಾರಂಬಳ್ಳಿ ಎಂಬ…

    Read more

    AMBEDKAR JAYANTI: ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ..

    ಹೊಸನಗರ:ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ಸಮಾನತೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading