

ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಅರಣ್ಯ ಒತ್ತುವರಿ ಜಾಗವನ್ನು ತೇರವು ಮಾಡುವ ನೆಪದಲ್ಲಿ ಬಡ ರೈತನ ಮನೆಯನ್ನು ದ್ವಂಸ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಸಾಮಗ್ರಿಗಳನ್ನ ರಸ್ತೆಗೆ ಎಸೆದಿರುವುದನ್ನ ವಿರೋಧಿಸಿ ಮಾಜಿ ಸಚಿವ ಹರತಾಳು ಹಾಲಪ್ಪ ಇಂದು ಅರಣ್ಯ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮನುಷ್ಯತ್ವ ಇರುವ ಯಾವೊಬ್ಬ ಅಧಿಕಾರಿಯ ಇಂತಹ ಕೆಲಸವನ್ನು ಮಾಡುವುದಿಲ್ಲ. ಇಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಎಫ್ ಐ ಆರ್ ದಾಖಲು ಮಾಡಲಾಗಿದ್ದು ಇಲ್ಲಿನ ಅಧಿಕಾರಿಗಳು ಮಣ್ಣಿನ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಇಂತಹ ಮಳೆಗಾಲದ ಸಂದರ್ಭದಲ್ಲಿ ಅವರು ವಾಸವಿದ್ದ ಮನೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ಮಾನವೀಯ ದೃಷ್ಟಿಯಿಂದ ಮಳೆಗಾಲ ಮುಗಿಯುವವರೆಗೆ ಅವರಿಗೆ ಅವಕಾಶವನ್ನು ನೀಡಬಹುದಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುವಂತೆ ಎಲ್ಲವೂ ಕಾನೂನಿನಡಿಯಲ್ಲಿ ಆಗುವುದಾದರೆ ಮಲೆನಾಡು ಭಾಗದಲ್ಲಿ ಯಾವೊಬ್ಬ ರೈತನ ಬದುಕಲು ಸಾಧ್ಯವಿಲ್ಲ ಕೆಲ ಅಧಿಕಾರಿಗಳ ವರ್ತನೆಯನ್ನು ನೋಡಿದರೆ ಕೆಲಸದ ಜೊತೆಗೆ ದುಡ್ಡನ್ನು ಮಾಡಲು ಬಂದಿದ್ದಾರೆ ಎನ್ನುವಂತೆ ಭಾಸವಾಗುತ್ತದೆ. ಸ್ಯಾಟಲೈಟ್ ಇಮೇಜ್ ಆಧಾರದ ಮೇಲೆ ನಾವು ಕ್ರಮವನ್ನು ಜರುಗಿಸುತ್ತೇವೆ ಎಂದು ಹೇಳುವುದಾದರೆ ಅಧಿಕಾರಿಗಳೇಕೆ ಎಲ್ಲವೂ ಸ್ಯಾಟಲೈಟ್ ಮೂಲಕ ಮಾಡಲಿ ಎಂದರು. ಸ್ವಲ್ಪ ಸಮಯದವರೆಗೆ ಇವರನ್ನ ಅಲ್ಲಿಯೇ ವಾಸಿಸಲು ಬಿಡುವಂತೆ ಮೇಲಾಧಿಕಾರಿಗಳಿಗೆ ಮನವಿಯನ್ನ ಮಾಡಿದ್ದೇವೆ ಅವರ ತೀರ್ಮಾನ ಬಳಿಕ ಏನು ಮಾಡಬೇಕೆಂಬುದನ್ನ ನಿರ್ಧರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಮತ್ತಿ ಮನೆ ಸುಬ್ರಮಣ್ಯ, ದೇವಾನಂದ್, ಗಣಪತಿ ಬೆಳಗೋಡು, ಹಾಲಗದ್ದೆ ಉಮೇಶ್, ಮೋಹನ್ ಮಂಡಾನಿ, ಗಣೇಶ್ ಹಿರೇಮಣತಿ, ಅಭಿಲಾಶ್, ಬಸವರಾಜ್, ಮನೋದರ ಮುಂತಾದವರು ಉಪಸ್ಥಿತರಿದ್ದರು.
HARATHALU HALAPPA
Discover more from Prasarana news
Subscribe to get the latest posts sent to your email.