HOSANAGARA-GYM ROOM ಸಾಧನೆಗೆ ಸಾಧನಗಳ ಕೊರತೆ..
ಇದು ಹೊಸನಗರ ಸರ್ಕಾರಿ ಜಿಮ್ ಕೊಠಡಿಯ ಕಥೆ-ವ್ಯಥೆ…

ಹಳೆಯ ಉಪಕರಣಗಳು

ಹೊಸನಗರ: ದೈಹಿಕ ಆರೋಗ್ಯ ವಿಷಯ ಬಂದಾಗ ಜನರು ಹೆಚ್ಚಾಗಿ ಜಿಮ್ ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಅಲ್ಲಿ ದೇಹವನ್ನು ದಂಡಿಸುವ ಮೂಲಕ ಕೊಬ್ಬು, ಸ್ನಾಯುಗಳ ಬೆಳವಣಿಗೆ, ತೂಕ ಇಳಿಕೆ ಹೀಗೆ ದೈಹಿಕ ಆರೋಗ್ಯವನ್ನು ಅಲ್ಲಿ ಪಡೆದುಕೊಳ್ಳುತ್ತಾರೆ.
ಅಂತೆಯೇ ಇದಕ್ಕೆ ಬೇಕಾದಂತಹ ಪೂರಕ ವಾತಾವರಣ ಹಾಗೂ ಸಾಧನ ಗಳಿರುತ್ತವೆ ಎಂಬ ಕಾರಣಕ್ಕೆ ಅಲ್ಲಿ ತೆರಳುವುದು ಸಹಜ.
ಹಾಗೆ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ವೃತ್ತಿಪರ ಬಾಡಿ ಬಿಲ್ಡಿಂಗ್ ಹವ್ಯಾಸವನ್ನು ಆಯ್ಕೆ ಮಾಡಿಕೊಂಡು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಆ ಮೂಲಕ ಏನಾದರೂ ಒಂದು ಸಾಧನೆಯನ್ನು ಮಾಡುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ.
ಅದರಂತೆಯೇ ಹೊಸನಗರ ನೆಹರು ಕ್ರೀಡಾಂಗಣದಲ್ಲಿಯೂ ಸಹ ಒಂದು ಸರ್ಕಾರಿ ಜಿಮ್ ಕೊಠಡಿಯಿದ್ದು ಇದು  ನಿತ್ಯ 25ಕ್ಕೂ ಹೆಚ್ಚು ಜನರು ಇಲ್ಲಿ ಅಭ್ಯಾಸವನ್ನು ಮಾಡುತ್ತಾರೆ ಇದೇ ಕಾರಣಕ್ಕಾಗಿ ಆರಂಭವಾಗಿದ್ದು. ಆದರೆ ಅಲ್ಲಿ ದೇಹವನ್ನ ದಂಡಿಸಿ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಏನಾದರೂ ಸಾಧನೆಯನ್ನು ಮಾಡುತ್ತೇನೆ ಎಂಬುವರಿಗೆ ಪೂರಕವಾದ ಸಾಧನಗಳಿಲ್ಲ. ಇರುವಂತಹ ಸಾಧನಗಳಲ್ಲಿಯೇ ಅಭ್ಯಾಸವನ್ನ ಮಾಡಬೇಕಷ್ಟೆ.


2006-07 ರಲ್ಲಿ ಆರಂಭವಾದ ಅಂತಹ ಈ ಜಿಮ್ ಕೊಠಡಿ ಆರಂಭದಲ್ಲಿ ಒಂದಿಷ್ಟು ಉತ್ತಮ ಸಾಧನಗಳನ್ನು ಒಳಗೊಂಡು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿತು ಆದರೆ ಈಗ ಅಲ್ಲಿ ಬೆರಳೆಣಿಕೆ ಅಷ್ಟೇ ಸಾಧನಗಳಿವೆ ಹಾಳಾದಂತಹ ಸಾಧನಗಳನ್ನು ಅಲ್ಲಿಂದ ತೆಗೆಯಲಾಗುತ್ತಿತ್ತು ಆದರೆ ತೆಗೆದಂತಹ ಸ್ಥಳಗಳಿಗೆ ಹೊಸ ಸಾಧನಗಳು ಬರುತ್ತಿರಲಿಲ್ಲ ಹೀಗೆ ಮುಂದುವರೆದು ಅಲ್ಲಿ ಇಂದಿಗೂ ಸಹ ಹಳೆಯ ಕೆಲವಷ್ಟೇ ಸಾಧನಗಳಿವೆ.
ಆಗಿನ ಉಪಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಬೇಡಿಕೆಯಂತೆ 3.80 ಲಕ್ಷ ಅನುದಾನದಲ್ಲಿ ಆರಂಭಗೊಂಡಂತಹ ಈ ಜಿಮ್ ಕೊಠಡಿಯಲ್ಲಿ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಬದಲಾವಣೆಯಾಗಿಲ್ಲ ಸ್ಥಳೀಯರಿಗೆ ಉಪಯೋಗವಾಗಲೆಂದು ಆರಂಭವಾದ ಅಂತಹ ಈ ಜಿಮ್ ಕೊಟ್ಟಡಿ ಅಭಿವೃದ್ಧಿಯಾಗದೆ ಉಳಿದಿದೆ.
ಜಿಮ್ ಗಳಲ್ಲಿ ದೈಹಿಕ ಆರೋಗ್ಯವನ್ನು ಪಡೆಯಲು ಹಾಗೂ ಸದೃಢ ದೇಹವನ್ನು ಹೊಂದಲು ಉತ್ತಮ ವಾತಾವರಣದ ಜೊತೆಗೆ ಅಗತ್ಯ ಸಾಧನಗಳು ಬೇಕೆಂಬುದನ್ನು ಸರ್ಕಾರ ಹಾಗೂ ಸಂಬಂಧ ಪಟ್ಟ ಇಲಾಖೆ ಅರಿತು ಕೂಡಲೇ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು.

ನಾನು ಪಟ್ಟಣ ಪಂಚಾಯತ್ ಅಧ್ಯಕ್ಷನಾಗಿದ್ದಾಗ ಜಿಮ್ ಕೊಠಡಿಯಷ್ಟೇ ಇತ್ತು ಬಳಿಕ ಆಗಿನ ಉಪಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರ ಬಳಿ ನಾವೆಲ್ಲರೂ ತೆರಳಿ ಮಲ್ಟಿ ಜಿಮ್ ತರೆಯುವಂತೆ ಮನವಿಯನ್ನ ಮಾಡಿ ಅದು ತೆರೆಯಲ್ಪಟ್ಟಿತು ಆದರೆ ಅಂದು ಹೇಗಿತ್ತೋ ಇಂದಿಗೂ ಸಹ ಹಾಗೆಯೇ ಇದೆ. ಗ್ರಾಮೀಣ ಪ್ರತಿಭೆಗಳ ಸಾಧನೆಯನ್ನ ಈ ಮೂಲಕ ಹೊರಹೋಮಿಸಲು ಅಲ್ಲಿ ಅಗತ್ಯ ಆಧುನಿಕ ಉಪಕರಣಗಳನ್ನು  ಕೂಡಲೇ  ಕಲ್ಪಿಸಿ ಕೊಡಬೇಕು.

ಎಂ ಎನ್ ಸುಧಾಕರ್.
ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತ್ ಹೊಸನಗರ.

ಅಗತ್ಯ ಆಧುನಿಕ ಉಪಕರಣಗಳನ್ನು ನೀಡುವಂತೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು ಶೀಘ್ರದಲ್ಲಿ ಉಪಕರಣಗಳು ಬರಲಿದೆ.

ರೇಖ್ಯಾ ನಾಯ್ಕ
ಸಹಾಯಕ ನಿರ್ದೇಶಕರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ.

ವರದಿ. ಮನುಸುರೇಶ್


Discover more from Prasarana news

Subscribe to get the latest posts sent to your email.

  • Related Posts

    PAURAKARMIKA: ಕ್ರೀಡಾಕೂಟ ಸಂಬಂಧಗಳ ಬೆಸುಗೆಗೆ‌ ಸಹಕಾರಿ: ಶಾಸಕ ಬೇಳೂರು…

    ಹೊಸನಗರ: ಸಂಬಂಧಗಳ ಪರಸ್ಪರ ವೃದ್ದಿಗೆ ಕ್ರೀಡಾಕೂಟಗಳ ಆಯೋಜನೆ ಸಹಕಾರಿ ಆಗಲಿದೆ‌ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು.ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ…

    Read more

    NETBALL:ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ನೆಟ್ ಬಾಲ್ ಪಂದ್ಯಾವಳಿಗೆ “ಎಂ.ಗಣೇಶ್ ಆಯ್ಕೆ”

    ಹೊಸನಗರ: ಮಂಗಳೂರು ವಿಶ್ವವಿದ್ಯಾನಿಲಯದ ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿ ಎಂ. ಗಣೇಶ್ ಮುಂಬರುವ ಜನವರಿ 2ರಿಂದ 6ರ ವರಗೆ ರಾಜಸ್ಥಾನದ ಜೈಪುರದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್ ಬಾಲ್ ಚಾಂಪಿಯನ್ಷಿಪ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading