

ಹೊಸನಗರ: ವಾಯುಪಡೆ ಹುತಾತ್ಮ ಯೋಧ ಮಂಜುನಾಥ್ ಅವರ ಅಗಲಿಕೆ ಬಹಳಷ್ಟು ನೋವು ಉಂಟುಮಾಡಿದೆ ಆದರೆ ಅವರು ನಮ್ಮ ದೇಶದ ಸಂಪತ್ತು ಅ ಸಂಪತ್ತು ದೇಶಕ್ಕೆ ಸಮರ್ಪಣೆ ಅಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ವಾಯುಪಡೆ ಹುತಾತ್ಮ ಯೋಧ ಮಂಜುನಾಥ್ ಜಿಎಸ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು ನಾವು ಮತ್ತು ನಮ್ಮ ಸರ್ಕಾರ ಹುತಾತ್ಮ ಯೋಧ ಮಂಜುನಾಥ್ ಕುಟುಂಬದ ಜೊತೆಗಿರುತ್ತದೆ. ದೇಶಕ್ಕಾಗಿ ಅವರು ಪ್ರಾಣವನ್ನ ಅರ್ಪಣೆ ಮಾಡಿರುವುದು ಎಂದಿಗೂ ಅಜರಾಮರ ಆ ಕುಟುಂಬಕ್ಕೆ ನಾವು ಎಷ್ಟೇ ಸಾಂತ್ವಾನವನ್ನು ಹೇಳಿದರು ಸಹ ಅವರ ಅಗಲಿಕೆ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದರು.

ಇಲ್ಲಿನ ಗ್ರಾಮಸ್ಥರ ಬೇಡಿಕೆಯಂತೆ ಅವರ ಹೆಸರಿನಲ್ಲಿ ಅವರು ಓದಿದ ಶಾಲೆಯಲ್ಲಿ ಒಂದು ಕೊಠಡಿ ಯನ್ನೂ ಹಾಗೂ ಗ್ರಾಮದಲ್ಲಿ ಅವರ ಪುತ್ತಳಿಯನ್ನು ನಿರ್ಮಾಣ ಮಾಡುವ ಕೆಲಸವನ್ನು ಶೀಘ್ರದಲ್ಲೇ ಮಾಡುತ್ತೇನೆ ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಕಾರಣ ಅವರ ದೇಶಕ್ಕಾಗಿ ಪ್ರಾಣವನ್ನ ಅರ್ಪಣೆ ಮಾಡಿದವರು ಅವರಂತೆ ದೇಶ ಸೇವೆ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಬರುವಂತಾಗಬೇಕು ಈ ನಿಟ್ಟಿನಲ್ಲಿ ಈ ಕೆಲಸ ಶೀಘ್ರವಾಗಿ ಮಾಡಲಾಗುವುದು ಎಂದರು ಜೊತೆಗೆ ಅವರ ಅಗಲಿಕೆಯ ನೋವನ್ನು ಅವರ ಕುಟುಂಬ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪ್ರಸನ್ನ ಕುಮಾರ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಕಲಗೋಡು ರತ್ನಾಕರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಚಂದ್ರಮೌಳಿ, ಬಿಪಿ ರಾಮಚಂದ್ರ ಮುಖಂಡರಾದ ಬಿ ಜಿ ನಾಗರಾಜ್, ಏರಿಗೆ ಉಮೇಶ್ ಸದಾಶಿವ ಶೆಟ್ಟಿ ಪಟ್ಟಣ ಪಂಚಾಯತ್ ಸದಸ್ಯರಾದ ಗುರುರಾಜ್, ಅಶ್ವಿನಿ ಕುಮಾರ್ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ್ ಮುಖಂಡರಾದಂತ ಅಮೀರ್ ಹಂಜ ಮಾಸ್ತಿಕಟ್ಟೆಸುಬ್ರಮಣ್ಯ ಶಾಸಕರ ಆಪ್ತ ಸಹಾಯಕರಾದ ಸಣ್ಣಕಿ ಮಂಜು, ಗುರು ಜಯನಗರ ಉಪಸ್ಥಿತರಿದ್ದರು....
DISTRICT INCHARGE MINISTER...